ADVERTISEMENT

ಬುಧವಾರ, 27–7–1994

1994

​ಪ್ರಜಾವಾಣಿ ವಾರ್ತೆ
Published 26 ಜುಲೈ 2019, 19:45 IST
Last Updated 26 ಜುಲೈ 2019, 19:45 IST

ಹೊಸ ಆದೇಶ ತಡೆಹಿಡಿಯಲು ದೇವೇಗೌಡ ಒತ್ತಾಯ

ನವದೆಹಲಿ, ಜುಲೈ 26– ನ್ಯಾಯಮೂರ್ತಿ ಓ. ಚಿನ್ನಪ್ಪ ರೆಡ್ಡಿ ವರದಿಗೂ ರಾಜ್ಯ ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಹೊರಡಿಸಿದ ಮೀಸಲಾತಿ ಆಜ್ಞೆಗೂ ಯಾವುದೇ ತಾಳ ಮೇಳವಿಲ್ಲದ ಕಾರಣ, ಇದರಿಂದ ತಮಗೆ ಅನ್ಯಾಯವಾಗಿದೆ ಎಂದು ಕೆಲವು ಜಾತಿಗಳು ಸಲ್ಲಿಸಿರುವ ಮನವಿ ಬಗೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ರಚಿಸಲಾಗಿರುವ ಹಿಂದುಳಿದ ಆಯೋಗ ಒಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಆ ಆಜ್ಞೆಯನ್ನು ಹಿಂತೆಗೆದುಕೊಂಡು 1986ರ ತಾತ್ಕಾಲಿಕ ಆಜ್ಞೆಯನ್ನೇ ಮುಂದುವರೆಸಬೇಕೆಂದು ಕರ್ನಾಟಕ ಜನತಾದಳದ ಅಧ್ಯಕ್ಷ ಎಚ್.ಡಿ. ದೇವೇಗೌಡ ಇಂದು ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರನ್ನು ಒತ್ತಾಯಿಸಿದರು.

ಷೇರು ಹಗರಣ– ಆರೋಪದಿಂದ ಸಚಿವ ಮನಮೋಹನ್‌ಗೆ ಮುಕ್ತಿ

ADVERTISEMENT

ನವದೆಹಲಿ, ಜುಲೈ 26 (ಪಿಟಿಐ, ಯುಎನ್‌ಐ)– ಷೇರು ಹಗರಣದ ತನಿಖೆ ನಡೆಸಿದ ಜಂಟಿ ಸಂಸತ್ ಸಮಿತಿ (ಜೆಪಿಸಿ)ಯು ಹಣಕಾಸು ಸಚಿವ ಮನಮೋಹನ ಸಿಂಗ್ ಹಾಗೂ ಅವರ ಖಾತೆಗಳಿಗೆ ಸಂಬಂಧಿಸಿ ಮಾಡಿರುವ ಕರ್ತವ್ಯಲೋಪ ಹಾಗೂ ವಿಫಲತೆಯ ಪ್ರಮುಖ ತೀರ್ಮಾನಗಳನ್ನು ಸರ್ಕಾರ ತಿರಸ್ಕರಿಸಿದೆಯಲ್ಲದೆ ಸಚಿವ ಶಂಕರಾನಂದ ಅವರ ವಿರುದ್ಧ ಮಾಡಿರುವ ಟೀಕೆಗೆ
ಸಾಕ್ಷ್ಯಾಧಾರಗಳಿಲ್ಲ ಎಂದು ತಳ್ಳಿಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.