ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 9–2–1998

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 19:35 IST
Last Updated 8 ಫೆಬ್ರುವರಿ 2023, 19:35 IST
   

‘ಭ್ರಷ್ಟ’ ಕಾಂಗ್ರೆಸ್ಸಿಗರ ವಿರುದ್ಧ ಕ್ರಮ: ಅಟಲ್‌ ಬಿಹಾರಿ ವಾಜಪೇಯಿ

ಮೋಗ, ಫೆ. 8 (ಪಿಟಿಐ)– ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ‘ಭ್ರಷ್ಟ’ ಕಾಂಗ್ರೆಸ್‌ ಮುಖಂಡರ ವಿರುದ್ಧ ಮೊಕದ್ದಮೆ ಹೂಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ ಅಟಲ್‌ ಬಿಹಾರಿ ವಾಜಪೇಯಿ ಹೇಳಿದರು.

ಬೊಫೋರ್ಸ್‌ ಫಿರಂಗಿ ಖರೀದಿ ಲಂಚ ಪ್ರಕರಣದ ‘ಸತ್ಯಾಂಶ ಇನ್ನೇನು ಬಯಲಾಗಲಿರುವುದನ್ನು ಅರಿತು ಹೆದರಿದ’ ಕಾಂಗ್ರೆಸ್‌ ಪಕ್ಷವು ಗುಜ್ರಾಲ್‌ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆಯಿತು ಎಂದು ಲೂಧಿಯಾನ ಹಾಗೂ ಮೋಗದಲ್ಲಿ ಚುನಾವಣಾ ಸಭೆಗಳಲ್ಲಿ ವಾಜ‍ಪೇಯಿ ಅವರು ಹೇಳಿದರು.

ADVERTISEMENT

ಲೋಕಶಕ್ತಿ ಪ್ರಣಾಳಿಕೆ:
ಆಡಳಿತ ವಿಕೇಂದ್ರೀಕರಣಕ್ಕೆ ಒತ್ತು

ಬೆಂಗಳೂರು, ಫೆ. 8– ಆಡಳಿತ ವಿಕೇಂದ್ರೀಕರಣ; ಗ್ರಾಮ ಸ್ವರಾಜ್ಯ; ಮಹಿಳೆಯರಿಗೆ ಮೀಸಲಾತಿ; ಕಡ್ಡಾಯ ಪ್ರಾಥಮಿಕ ಶಿಕ್ಷಣ; ಎಲ್ಲ ಗ್ರಾಮಗಳಿಗೂ ಕುಡಿಯುವ ನೀರು ಪೂರೈಕೆ ಹಾಗೂ
ನೈರ್ಮಲ್ಯೀಕರಣಕ್ಕೆ ಒತ್ತು ನೀಡುವುದಾಗಿ ಲೋಕಶಕ್ತಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.