ವಿವಾದದ ಸಿಂಧಿ ಅಕಾಡೆಮಿಗೆ ಕೃಷ್ಣ ತಡೆ
ಬೆಂಗಳೂರು, ಆ. 28: ಕಳೆದ ತಿಂಗಳ 19ರಂದು ಕರ್ನಾಟಕ ಸಿಂಧಿ ಅಕಾಡೆಮಿ ರಚಿಸಿ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ತಡೆ ನೀಡಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಬರಗೂರು ರಾಮಚಂದ್ರಪ್ಪ, ಸಿಂಧಿ ಅಕಾಡೆಮಿ ರಚನೆಗೆ ಆಕ್ಷೇಪಿಸಿ ಪತ್ರ ಬರೆದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಕ್ರಮ ತೆಗೆದುಕೊಂಡಿದ್ದಾರೆ. ಸಿಂಧಿ ಅಕಾಡೆಮಿ ರಚಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ವಿವಾದದ ಸುಳಿಯಲ್ಲಿ ಸಿಲುಕಿತ್ತು.
ಟಾಡಾ ಕೈದಿಗಳ ವಿರುದ್ಧ ಎಲ್ಲ ಆರೋಪ ವಾಪಸ್
ಬೆಂಗಳೂರು, ಆ. 28: ಮೈಸೂರಿನ ಕಾರಾಗೃಹದಲ್ಲಿ ಇರುವ 51 ಜನ ಟಾಡಾ ಕೈದಿಗಳ ವಿರುದ್ಧದ ಎಲ್ಲ ಭಾರತೀಯ ದಂಡ ಸಂಹಿತೆ ಪ್ರಕರಣಗಳನ್ನು ಕೈಬಿಡಲು ರಾಜ್ಯ ಸರ್ಕಾರ ಇಂದು ತೀರ್ಮಾನ ತೆಗೆದುಕೊಂಡಿದ್ದು, ಅತ್ತ ಮೈಸೂರಿನ ಸೆಷನ್ಸ್ ನ್ಯಾಯಾಧೀಶರು ಈ ಆರೋಪಿಗಳನ್ನು ಷರತ್ತಿನ ಮೇಲೆ ಬಿಡುಗಡೆ ಮಾಡಲು ಆದೇಶಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.