ADVERTISEMENT

25 ವರ್ಷಗಳ ಹಿಂದೆ: ಭಾನುವಾರ, ಜೂನ್‌ 9, 1996

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 19:30 IST
Last Updated 8 ಜೂನ್ 2021, 19:30 IST

ರಾಜೀನಾಮೆ ವಾಪಸಿಗೆ ಭಿನ್ನ ಶಾಸಕರ ಒಪ್ಪಿಗೆ

ಬೆಂಗಳೂರು, ಜೂನ್ 8– ರಾಜ್ಯ ದಳ ಶಾಸಕಾಂಗ ಪಕ್ಷದಲ್ಲಿ ಭುಗಿಲೆದ್ದಿರುವ ಅಸಮಾಧಾನವನ್ನು ಶಮನಗೊಳಿಸಲೆಂದೇ ದೆಹಲಿಯಿಂದ ಬೆಂಗಳೂರಿಗೆ ದೌಡಾಯಿಸಿದ್ದ ಜನತಾ ದಳದ ಅಧ್ಯಕ್ಷರೂ ಆಗಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಸಿ.ಎಂ. ಇಬ್ರಾಹಿಂ ಸಂಧಾನದಿಂದಾಗಿ, ವಿಧಾನಸಭೆ ಅಧ್ಯಕ್ಷರಿಗೆ ನೀಡಿದ್ದ ರಾಜೀನಾಮೆಯನ್ನು ಹಿಂತೆಗೆದು ಕೊಳ್ಳಲು ಬಂಡೆದಿದ್ದ ಶಾಸಕರು
ಸಮ್ಮತಿಸಿದ್ದಾರೆ.

ಎರಡು ಹಂತದಲ್ಲಿ ನಡೆದ ಸಂಧಾನ ಹಾಗೂ ತೆರೆಮರೆಯಲ್ಲಿ ನಡೆದ ವಿದ್ಯ ಮಾನಗಳ ಪರಿಣಾಮವಾಗಿ ನೂತನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ನೇತೃತ್ವದ ಸರ್ಕಾರಕ್ಕೆ ಎದುರಾಗಿದ್ದ ಗಂಡಾಂತರ ನಿವಾರಣೆಯಾದಂತಾಗಿದೆ.

ADVERTISEMENT

ಕೋರ್ಟ್‌ಗೆ ಅಯೋಧ್ಯಾ ವಿವಾದ–ವಾಜಪೇಯಿ ಟೀಕೆ

ಮದ್ರಾಸ್, ಜೂನ್ 8 (ಪಿಟಿಐ)– ಅಯೋಧ್ಯಾ ವಿವಾದವನ್ನು ಸುಪ್ರೀಂ ಕೋರ್ಟಿಗೆ ಒಪ್ಪಿಸುವ ಸಂಯುಕ್ತ ರಂಗ ಸರ್ಕಾರದ ನಿರ್ಧಾರವನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.