ADVERTISEMENT

25 ವರ್ಷ ಹಿಂದೆ: ಬುಧವಾರ, 3–1–1996

​ಪ್ರಜಾವಾಣಿ ವಾರ್ತೆ
Published 2 ಜನವರಿ 2021, 19:31 IST
Last Updated 2 ಜನವರಿ 2021, 19:31 IST
   

ಪ್ರಧಾನಿ ಸೂಚನೆ ಚರ್ಚೆಗೆ ಸಂಪುಟ ಉಪಸಮಿತಿ ರಚನೆ
ಬೆಂಗಳೂರು, ಜ.2–
ತಮಿಳುನಾಡಿಗೆ ಕೂಡಲೇ 6 ಟಿಎಂಸಿ ನೀರು ಬಿಡಬೇಕೆಂಬ ಪ್ರಧಾನಿ ಸೂಚನೆಗೆ ಸಂಬಂಧಿಸಿದಂತೆ ಮುಂದಿನ ಹೆಜ್ಜೆಯ ಬಗ್ಗೆ ತೀರ್ಮಾನಿಸಲು ಇಂದು ಇಲ್ಲಿ ಸೇರಿದ್ದ ಸರ್ವಪಕ್ಷಗಳ ಸಭೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾರದೆ ನಾಳೆಗೆ ಮುಂದೆ ಹೋಯಿತು.

ಸರ್ವ ಪಕ್ಷ ಸಭೆಗೂ ಮುನ್ನ ಸೇರಿದ್ದ ಸಚಿವ ಸಂಪುಟ ಸಭೆಯು ಪ್ರಧಾನಿ ಅವರ ಸೂಚನೆಯ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮುಖ್ಯಮಂತ್ರಿ ಅವರ ನೇತೃತ್ವದಲ್ಲಿ ಉಪಸಮಿತಿಯೊಂದನ್ನು ರಚಿಸಿದೆ.

ಈ ಸಮಿತಿಯಲ್ಲಿ ಉಪಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌, ಸಚಿವರುಗಳಾದ ಎಂ.ಸಿ.ನಾಣಯ್ಯ, ಎಂ.ಪಿ.ಪ್ರಕಾಶ್‌, ಸಿ.ಬೈರೇಗೌಡ, ಎಚ್‌.ಸಿ.ಮಹದೇವಪ್ಪ, ಸಿದ್ದರಾಮಯ್ಯ, ಆರ್‌.ಎಲ್‌.ಜಾಲಪ್ಪ, ಪಿ.ಜಿ.ಆರ್. ಸಿಂಧ್ಯಾ ಅವರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.