ADVERTISEMENT

25 ವರ್ಷಗಳ ಹಿಂದೆ | ಅಧಿಕಾರದಾಹಿ ಕಾಂಗ್ರೆಸ್: ವಾಜಪೇಯಿ ಟೀಕೆ

ಪ್ರಜಾವಾಣಿ ವಿಶೇಷ
Published 15 ಸೆಪ್ಟೆಂಬರ್ 2024, 23:35 IST
Last Updated 15 ಸೆಪ್ಟೆಂಬರ್ 2024, 23:35 IST
25 ವರ್ಷಗಳ ಹಿಂದೆ..
25 ವರ್ಷಗಳ ಹಿಂದೆ..   

ಆಂಧ್ರ: ಟಿಡಿಪಿ ಶಾಸಕ, ಮೂವರು ಅಂಗರಕ್ಷಕರ ಹತ್ಯೆ

ಹೈದರಾಬಾದ್, ಸೆ. 15– ಶಾಸಕ ಹಾಗೂ ಸಿರ್ಪೂರ್ ವಿಧಾನಸಭಾ ಕ್ಷೇತ್ರದ ಆಡಳಿತಾರೂಢ ತೆಲುಗು ದೇಶಂ ಪಕ್ಷದ ಅಭ್ಯರ್ಥಿ ಪಿ. ಪುರುಷೋತ್ತಮ ರಾವ್ ಹಾಗೂ ಅವರ ಮೂವರು ಅಂಗರಕ್ಷಕರನ್ನು ನಕ್ಸಲೀಯರು ಆಂಧ್ರದ ಅದಿಲಾಬಾದ್ ಜಿಲ್ಲೆಯ ಸಿರ್ಪೂರ್ ಕಾಗದ ನಗರದಲ್ಲಿ ಇಂದು ಮುಂಜಾನೆ ಗುಂಡಿಟ್ಟು ಕೊಂದಿದ್ದಾರೆ.

ಈ ಹತ್ಯೆಯ ಹಿನ್ನೆಲೆಯಲ್ಲಿ ಸಿರ್ಪೂರ್ ಕ್ಷೇತ್ರದಲ್ಲಿ ಸೆ. 18ರಂದು ನಡೆಯಬೇಕಾಗಿದ್ದ ಮತದಾನ ರದ್ದಾಗಿದೆ ಎಂದು ಚುನಾವಣಾ ಆಯೋಗದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಅಧಿಕಾರದಾಹಿ ಕಾಂಗ್ರೆಸ್: ವಾಜಪೇಯಿ ಟೀಕೆ

ನವದೆಹಲಿ, ಸೆ. 15– ‘ಸಮ್ಮಿಶ್ರ ಸರ್ಕಾರ ಸ್ಥಿರತೆ ನೀಡಲಾರದು ಎಂದು ಹೇಳುವ ಕಾಂಗ್ರೆಸ್ ಪಕ್ಷವು ಅಧಿಕಾರದಾಹಿ ಪಕ್ಷ’ ಎಂದು ಬಣ್ಣಿಸಿರುವ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಸಮ್ಮಿಶ್ರ ಸರ್ಕಾರಗಳು ಪೂರ್ಣಾವಧಿ ಬಾಳಲಾರವು ಎಂಬ ಕಾಂಗ್ರೆಸ್ ನಿಲುವಿಗೆ ತಮ್ಮ ಅಸಮ್ಮತಿ ಸೂಚಿಸಿದ್ದಾರೆ.

ADVERTISEMENT

‘ವಿಶ್ವದ ಹಲವಾರು ದೇಶಗಳಲ್ಲಿ ಸಮ್ಮಿಶ್ರ ಸರ್ಕಾರಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಭಾರತದಲ್ಲಿಯೂ ಕೆಲವು ರಾಜ್ಯಗಳಲ್ಲಿ ಈ ಪ್ರಯೋಗ ಯಶಸ್ವಿಯಾಗಿ ಸ್ಥಿರ ಸರ್ಕಾರ ಒದಗಿಸಿದೆ’ ಎಂದು ಅವರು ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.