ADVERTISEMENT

25 ವರ್ಷಗಳ ಹಿಂದೆ – ಪಾಕ್‌ಗೆ ನೆರವು: ಅಮೆರಿಕದ ಪ್ರಸ್ತಾವಕ್ಕೆ ಭಾರತ ಸಮ್ಮತಿ

ಪ್ರಜಾವಾಣಿ ವಿಶೇಷ
Published 23 ಜುಲೈ 2023, 1:10 IST
Last Updated 23 ಜುಲೈ 2023, 1:10 IST
25 ವರ್ಷಗಳ ಹಿಂದೆ ಈ ದಿನ
25 ವರ್ಷಗಳ ಹಿಂದೆ ಈ ದಿನ   

ಪಾಕ್‌ಗೆ ನೆರವು: ಅಮೆರಿಕದ ಪ್ರಸ್ತಾವಕ್ಕೆ ಭಾರತ ಸಮ್ಮತಿ

ವಾಷಿಂಗ್ಟನ್‌, ಜುಲೈ 22 (ಪಿಟಿಐ)– ದಿಗ್ಬಂಧನಗಳಿಂದಾಗಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ ಎದುರಿಸಿರುವ ಪಾಕಿಸ್ತಾನಕ್ಕೆ ನೆರವು ನೀಡಲು ಅಂತರರಾಷ್ಟ್ರೀಯ ಹಣಕಾಸು ನಿಧಿಗೆ (ಐಎಂಎಫ್‌) ಅನುವು ಮಾಡಿಕೊಡಬೇಕು ಎಂಬ ಅಮೆರಿಕದ ಪ್ರಸ್ತಾವಕ್ಕೆ ಭಾರತ ಸಮ್ಮತಿಸಿದೆ.

ಈ ವಿಷಯವನ್ನು ಅಮೆರಿಕದ ವಿದೇಶಾಂಗ ವಿಭಾಗ ಮತ್ತು ಹಣಕಾಸು ಖಾತೆಯ ಹಿರಿಯ ಅಧಿಕಾರಿಗಳು ನಿನ್ನೆ ಸುದ್ದಿಗಾರರಿಗೆ ತಿಳಿಸಿದರು.

ಪಾಕಿಸ್ತಾನಕ್ಕೆ ತುರ್ತು ನೆರವಿನ ಅಗತ್ಯವಿರುವುದರ ಬಗ್ಗೆ ಅಮೆರಿಕ ಭಾರತದ ಚರ್ಚೆ ನಡೆಸಿತು ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.