ADVERTISEMENT

25 ವರ್ಷಗಳ ಹಿಂದೆ | ಹಾಸನ: ಮತ್ತಷ್ಟು ವ್ಯಾಪಿಸಿದ ಮಲೇರಿಯಾ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 0:22 IST
Last Updated 8 ಜುಲೈ 2025, 0:22 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಹಾಸನ: ಮತ್ತಷ್ಟು ವ್ಯಾಪಿಸಿದ ಮಲೇರಿಯಾ

ಹಾಸನ, ಜುಲೈ 7– ತುಮಕೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿರುವ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಜೂನ್ ತಿಂಗಳಿನಲ್ಲೂ ಮಲೇರಿಯಾ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ಅರಸೀಕೆರೆ ತಾಲ್ಲೂಕಿನಲ್ಲಿ ಕಳೆದ ಮೇ ತಿಂಗಳಿನಲ್ಲಿ 252 ಪ್ರಕರಣಗಳು ವರದಿಯಾಗಿದ್ದರೆ, ಜೂನ್‌ ತಿಂಗಳಿನಲ್ಲಿ 345 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲ ನೀತಿಗೆ ಮಾರ್ಗಸೂಚಿ: ಒಮ್ಮತಕ್ಕೆ ಕೇಂದ್ರ ವಿಫಲ

ನವದೆಹಲಿ, ಜುಲೈ 7– ಅಂತರರಾಜ್ಯ ನದಿ ನೀರು ಹಂಚಿಕೆಗೆ ಪೂರಕವಾಗುವಂತೆ ನದಿ ಕಣಿವೆ ಸಂಸ್ಥೆ ರಚನೆಯ ಕೇಂದ್ರದ ಸಲಹೆಯನ್ನು ರಾಜ್ಯಗಳು ತಿರಸ್ಕರಿಸಿವೆ.
ರಾಷ್ಟ್ರೀಯ ಜಲ ನೀತಿಗೆ ಮಾರ್ಗಸೂಚಿಗಳ ರಚನೆಯ ಬಗೆಗೆ ಒಮ್ಮತ ಮೂಡಿಸಲು ಇಂದಿನ ಸಭೆಯು ವಿಫಲಗೊಂಡಿದ್ದರಿಂದ ಈ ವಿವಾದ ಮತ್ತೆ ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT