ADVERTISEMENT

25 ವರ್ಷಗಳ ಹಿಂದೆ: ಗುರುವಾರ 05-09-1996

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 19:31 IST
Last Updated 4 ಸೆಪ್ಟೆಂಬರ್ 2021, 19:31 IST
   

ಮತ್ತೆ ಇರಾಕ್ ಮೇಲೆ ತ್ವರಿತ ಕ್ಷಿಪಣಿ ದಾಳಿ
ದುಬೈ, ಸೆ. 4 (ಪಿಟಿಐ)–
ಇರಾಕ್‌ನ ವಿರುದ್ಧ ‘ಕಾಲಮಿತಿ ತ್ವರಿತ ಕಾರ್ಯಾ ಚರಣೆ’ ಮುಂದುವರಿಸಿರುವ ಅಮೆರಿಕದ ಸೇನೆ ಇಂದು ಇರಾಕ್‌ನ ಮಿಲಿಟರಿ ಸೇನಾ ನೆಲೆಗಳ ಮೇಲೆ ಮತ್ತೆ 17 ಕ್ಷಿಪಣಿ ದಾಳಿ ನಡೆಸುವುದರೊಂದಿಗೆ ಕೊಲ್ಲಿ ರಾಷ್ಟ್ರದಲ್ಲಿ ಸಮರ ಚಟುವಟಿಕೆ ಬಿರುಸುಗೊಂಡಿದೆ.

ಇರಾಕ್‌ನ ಮೇಲೆ ಅಮೆರಿಕ ನಡೆಸಿದ ಕ್ಷಿಪಣಿ ದಾಳಿ ಯಶಸ್ವಿಯಾಗಿದೆ. ದಕ್ಷಿಣ ಖುರ್ದಿಷ್ ಪ್ರದೇಶದಿಂದ ಇರಾಕ್ ಸೇನೆ ಹಿಂದಕ್ಕೆ ಮರಳುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಹೇಳಿಕೊಂಡಿದ್ದಾರೆ.

ಅಮೆರಿಕದ ಸೇನೆಯ ಮೊದಲ ಹಂತದ ದಾಳಿಗೆ ಐದು ಮಂದಿ ಬಲಿ ಯಾಗಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಇರಾಕಿ ಟೆಲಿವಿಷನ್ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.