ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ: ಶನಿವಾರ, 13–1–1996

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 19:31 IST
Last Updated 12 ಜನವರಿ 2021, 19:31 IST
   

ಕಾವೇರಿ ನ್ಯಾಯಮಂಡಳಿ ಕಲಾಪ ಸ್ಥಗಿತಕ್ಕೆ ದೇವೇಗೌಡ ಒತ್ತಾಯ

ನವದೆಹಲಿ, ಜ. 12– ಕಾವೇರಿ ನ್ಯಾಯಮಂಡಳಿಗೆ ಮಾರ್ಗಸೂಚಿ ರೂಪಿಸುವವರೆಗೆ ಅದರ ಕಲಾಪ ಸ್ಥಗಿತಗೊಳಿಸಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ದೇವೇಗೌಡ ಅವರು ಇಂದು ಇಲ್ಲಿ ಒತ್ತಾಯಿಸಿದರು. ಈ ತಿಂಗಳ 30ರಂದು ಸೇರಲಿರುವ ನ್ಯಾಯಮಂಡಳಿ ಮುಂದೆ ರಾಜ್ಯ ಸರ್ಕಾರ ಈ ಸಂಬಂಧ ಅರ್ಜಿ ಸಲ್ಲಿಸುವುದು ಎಂದು ತಿಳಿಸಿದರು.

ರಾಜ್ಯದ 4 ಸಕ್ಕರೆ ಕಾರ್ಖಾನೆಗಳಿಗೆ ಅನುಮತಿ

ADVERTISEMENT

ನವದೆಹಲಿ, ಜ. 12– ಈ ಹಿಂದೆ ಸಕ್ಕರೆ ಕಾರ್ಖಾನೆಗಳ ಮಂಜೂರಾತಿಯಲ್ಲಿ ಸಾರ್ವಜನಿಕ ಉದ್ದಿಮೆಗಳಿಗೂ ಸಹಕಾರ ಕ್ಷೇತ್ರಗಳಿಗೂ ಆದ್ಯತೆ ನೀಡುತ್ತಿದ್ದ ಕೇಂದ್ರ ಸರ್ಕಾರ ಈಗ ಖಾಸಗಿ ವಲಯದತ್ತ ಒಲವು ತೋರಿದೆ.

ಈ ಅವಕಾಶ ಬಳಸಿಕೊಳ್ಳಲು ಕರ್ನಾಟಕವು 30 ಹೊಸ ಖಾಸಗಿ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಗೆ ಅನುಮತಿ ಕೋರಿದೆ. ಆದರೆ ಈಗ ಗೊತ್ತಾಗಿರುವ ಮಾಹಿತಿಯ ಪ್ರಕಾರ, ನಾಲ್ಕು ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ಅನುಮತಿ ನೀಡಿದೆ. ಅವುಗಳೆಂದರೆ, ಹೊಳೇನರಸೀಪುರ ತಾಲ್ಲೂಕಿನ ದೊಡ್ಡಬೇಘಟ್ಟಹಳ್ಳಿಯ ಚಾಮುಂಡೇಶ್ವರಿ ಶುಗರ್‍ಸ್‌ ಲಿ., ಹರಪನಹಳ್ಳಿ ತಾಲ್ಲೂಕಿನ ತಿಮ್ಲಾಪುರದಲ್ಲಿ ಸ್ಥಾಪಿಸಲಿರುವ ಶ್ಯಾಮನೂರು ಶುಗರ್‍ಸ್‌ ಮತ್ತು ವಿಜಾಪುರದ ಎರಡು ಸಂಸ್ಥೆಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.