ADVERTISEMENT

25 ವರ್ಷಗಳ ಹಿಂದೆ: ಸೋಮವಾರ, 18–12–1995

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 19:30 IST
Last Updated 17 ಡಿಸೆಂಬರ್ 2020, 19:30 IST
   

ಅಧ್ಯಕ್ಷೀಯ ಮಾದರಿ ಆಡಳಿತ: ಶೇಷನ್‌ ಒಲವು
ಹೈದರಾಬಾದ್, ಡಿ. 17 (ಪಿಟಿಐ)–
ದೇಶದಲ್ಲಿ ಅಧ್ಯಕ್ಷೀಯ ಮಾದರಿಯ ಆಡಳಿತವನ್ನು ಜಾರಿಗೆ ತರಬೇಕು ಎಂದು ಮುಖ್ಯ ಚುನಾವಣಾ ಅಧಿಕಾರಿ ಟಿ.ಎನ್‌.ಶೇಷನ್‌ ಅವರು ಒಲವು ವ್ಯಕ್ತಪಡಿಸಿದ್ದಾರೆ.

ಐಎಎಸ್‌ ಅಧಿಕಾರಿಗಳ ಸಂಖ್ಯೆಯನ್ನು 50 ಶೇಕಡಾದಷ್ಟು ಕಡಿಮೆ ಮಾಡುವುದು ಹಾಗೂ ರಾಷ್ಟ್ರೀಯ ಚಟುವಟಿಕೆಯ ಪ್ರಮುಖ ಕ್ಷೇತ್ರಗಳ ಮೇಲ್ವಿಚಾರಣೆಗೆ ಸ್ವತಂತ್ರ ಆಯೋಗಗಳ ರಚನೆ– ಶೇಷನ್‌ ಅವರು ಮುಂದಿಟ್ಟಿರುವ ಇನ್ನೆರಡು ವಿಚಾರಗಳು.

ಮುಂದಿನ ವಾರ ಮಾರುಕಟ್ಟೆಗೆ ಬರಲಿರುವ ಶೇಷನ್‌ ಅವರ ಪುಸ್ತಕ ‘ಡಿಜನರೇಷನ್‌ ಆಫ್‌ ಇಂಡಿಯಾ’ದಲ್ಲಿ ಈ ವಿಚಾರಗಳು ಪ್ರಕಟವಾಗಲಿವೆ.

ADVERTISEMENT

ಟೆಲಿಕಾಂ ವೈಫಲ್ಯಕ್ಕೆ ಸಂಸತ್‌ ಸಮಿತಿ ಟೀಕೆ
ನವದೆಹಲಿ, ಡಿ. 17 (ಪಿಟಿಐ)–
ದೂರವಾಣಿ ಸೌಲಭ್ಯಗಳ ಬಳಕೆಯಲ್ಲಿನ ವೈಫಲ್ಯ ಮತ್ತು ದೂರಸಂಪರ್ಕ ವಲಯಗಳಿಗೆ ದತ್ತ ಅಧಿಕಾರಗಳನ್ನು ನೀಡದಿರುವ ಬಗ್ಗೆ ಸಂಸತ್ತಿನ ಸ್ಥಾಯಿ ಸಮಿತಿಯು ಸಂಪರ್ಕ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡಿದೆ.
ದೂರಸಂಪರ್ಕ ಹಗರಣಕ್ಕೆ ಸಂಬಂಧಿಸಿ ಜಂಟಿ ಸಂಸದೀಯ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ವಾರದಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಡೆಯಲು ಬಿಡದ ಪ್ರತಿಪಕ್ಷಗಳ ಬತ್ತಳಿಕೆಗೆ ಈ ವರದಿ ಸರ್ಕಾರದ ವಿರುದ್ಧ ಮತ್ತೊಂದು ಅಸ್ತ್ರವನ್ನು ಒದಗಿಸಿದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.