ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ 3–3–1970

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2020, 20:00 IST
Last Updated 2 ಮಾರ್ಚ್ 2020, 20:00 IST

ಹೊಸ ಬಸ್ಸುಗಳ ಖರೀದಿಗೆ ರಾಜ್ಯ ಸಾರಿಗೆ ಸಂಸ್ಥೆಯ 2 ಕೋಟಿ ರೂಸಾಲ ಯೋಜನೆ
ಬೆಂಗಳೂರು, ಮಾರ್ಚ್‌ 2–
ಹಳೆಯ ಬಸ್ಸುಗಳ ಬದಲು ಹೊಸದಾಗಿ 288 ವಾಹನಗಳನ್ನು ಕೊಳ್ಳಲು ಹಾಗೂ 250 ನೂತನ ಬಸ್‌ಗಳನ್ನು ಕೊಳ್ಳುವುದಕ್ಕೆ ಹಣ ಒದಗಿಸಲು ರಾಜ್ಯ ರಸ್ತೆ ಸಾರಿಗೆ ಕಾರ್ಪೊರೇಷನ್‌ ಎರಡು ಕೋಟಿ ರೂ.ಗಳ ಡಿಬೆಂಚರ್‌ ಸಾಲ ಎತ್ತಲಿದೆ.

**

ಹಾವೇರಿಯಲ್ಲಿ ನಗರ ಪುಣೆ ರೈಲಿನ ಎರಡು ಬೋಗಿಗಳಿಗೆ ಬೆಂಕಿ
ಹಾವೇರಿ, ಮಾರ್ಚ್‌ 2–
ಮೈಸೂರು– ಮಹಾರಾಷ್ಟ್ರ ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಧಾನಮಂತ್ರಿ ಪರಿಹಾರ, ಸಲಹೆಗಳನ್ನು ಪ್ರತಿಭಟಿಸಿ ಸುಮಾರು ನಾಲ್ಕು ಸಾವಿರ ಮಂದಿಯ ಗುಂಪೊಂದು ಇಂದು ಮಧ್ಯಾಹ್ನ ಹಾವೇರಿ ರೈಲು ನಿಲ್ದಾಣದ ಬಳಿ ಬೆಂಗಳೂರು– ಪುಣೆ ಮೆಯಿಲ್‌ ರೈಲ್‌ನ ಎರಡು ಬೋಗಿಗಳಿಗೆ ಬೆಂಕಿ ಹಚ್ಚಿ ಅವು ಸಂಪೂರ್ಣವಾಗಿ ಜಖಂಗೊಂಡಿವೆ.

ADVERTISEMENT

ಸುಮಾರು ಒಂದು ಸಾವಿರ ಮಂದಿಯ ಗುಂಪು ಹಾವೇರಿ ಟೆಲಿಫೋನ್‌ ಎಕ್ಸ್‌ಚೇಂಜನ್ನು ಸಂಪೂರ್ಣವಾಗಿ ನಾಶಪಡಿಸಿದ್ದರಿಂದ ಹುಬ್ಬಳ್ಳಿ– ಹಾವೇರಿ ನಡುವೆ ಎಲ್ಲಾ ಟೆಲಿಫೋನ್‌ ಸಂಪರ್ಕವೂ ಮುರಿದುಬಿದ್ದಿದೆ.

**

ಸರ್ಕಾರಿ ಕೈಗಾರಿಕೆಗಳಲ್ಲಿ, ಗ್ರಾಮ ಲೆಕ್ಕಿಗರ ಕೆಲಸಕ್ಕೆ ನೇಮಕ ಪರಿಶೀಲನೆಯಲ್ಲಿ
ಬೆಂಗಳೂರು, ಮಾರ್ಚ್‌ 2–
ಸ್ಥಳೀಯ ಅಭ್ಯರ್ಥಿಗಳಿಗೆ ಸರ್ಕಾರಿ ಕ್ಷೇತ್ರದ ಕೈಗಾರಿಕೆಗಳು ಮತ್ತು ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗರ ಕೆಲಸಗಳನ್ನು ಒದಗಿಸುವ ಸಾಧ್ಯತೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ಮುಖ್ಯಮಂತ್ರಿ ವೀರೇಂದ್ರ ಪಾಟೀಲ್‌ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.