ADVERTISEMENT

50 ವರ್ಷಗಳ ಹಿಂದೆ | ಮಂಗಳವಾರ 5–3–1970

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2020, 19:59 IST
Last Updated 4 ಮಾರ್ಚ್ 2020, 19:59 IST

ಕಾವೇರಿ ಯೋಜನೆಗಳಿಗೆ ಕೇಂದ್ರದ ಕಡಿವಾಣ
ಬೆಂಗಳೂರು, ಮಾ. 4– ಕಾವೇರಿ ಬಯಲಿನಲ್ಲಿ ಯೋಜನಾ ಆಯೋಗ ಮಂಜೂರು ಮಾಡದ ಯೋಜನೆಯನ್ನು ಮುಂದುವರಿಸುವುದಿಲ್ಲ ಹಾಗೂ ಹೊಸ ಯೋಜನೆಯನ್ನು ಕೈಗೊಳ್ಳುವುದೂ ಇಲ್ಲ ಎಂಬ ಆಶ್ವಾಸನೆಯನ್ನು ನೀಡಬೇಕೆಂದು ರಾಜ್ಯ ಸರ್ಕಾರವನ್ನು ಕೇಂದ್ರ ಕೇಳಿದೆ.

ಕೇಂದ್ರ ನೀರಾವರಿ ಖಾತೆ ಸಚಿವ ಡಾ.ಕೆ.ಎಲ್‌.ರಾವ್‌ ಅವರಿಗೆ ಪತ್ರ ಬರೆದು 1924ರ ಕಾವೇರಿ ನೀರು ಬಳಕೆ ಸಂಬಂಧದ ವಿವಾದದ ಬಗ್ಗೆ ಕೇಂದ್ರ ಕಳುಹಿಸಿದ್ದ ಸಲಹೆಗಳಿಗೆ ಒಂದು ವಾರದೊಳಗೆ ರಾಜ್ಯ ಸರ್ಕಾರ ತನ್ನ ಅಭಿಪ್ರಾಯಗಳನ್ನು ತಿಳಿಸಬೇಕೆಂದು ಸೂಚಿಸಿ ಈ ಮಧ್ಯೆ ಈ ಆಶ್ವಾಸನೆ ಕೊಡಬೇಕೆಂದು ಕೇಳಿದ್ದಾರೆಂದು ಗೊತ್ತಾಗಿದೆ.

1924ರ ಒಪ್ಪಂದದ ಬಗ್ಗೆ ಇರುವ ವಿವಾದವನ್ನು ಪಂಚಾಯಿತಿಗೆ ಒಪ್ಪಿಸಬೇಕೆಂದು ಮದರಾಸ್‌ ಸರ್ಕಾರ ಒತ್ತಾಯ ಮಾಡುತ್ತಿದೆಯೆಂದೂ ಡಾ.ರಾವ್‌ ಅವರು ತಿಳಿಸಿದ್ದಾರೆಂದು ಹೇಳಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.