ADVERTISEMENT

50 ವರ್ಷಗಳ ಹಿಂದೆ| ಮಂಗಳವಾರ, 19–5–1970

​ಪ್ರಜಾವಾಣಿ ವಾರ್ತೆ
Published 18 ಮೇ 2020, 22:01 IST
Last Updated 18 ಮೇ 2020, 22:01 IST

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಭ್ರಷ್ಟಾಚಾರದ ಆರೋಪ

ನವದೆಹಲಿ, ಮೇ 18– ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಡೆದಿದೆಯೆನ್ನಲಾದ ಭ್ರಷ್ಟಾಚಾರದ ಆಪಾದನೆಗಳನ್ನು ಸರ್ಕಾರ ತೀವ್ರವಾಗಿ ಪರಿಗಣಿಸಿದ್ದು, ಈ ಸಂಬಂಧದಲ್ಲಿ ಬಂದಿರುವ ದೂರುಗಳನ್ನು ಪರಿಶೀಲಿಸುತ್ತಿದೆಯೆಂದು ಕೇಂದ್ರ ಅರ್ಥಶಾಖೆ ಸ್ಟೇಟ್‌ ಸಚಿವ
ಪಿ.ಸಿ.ಸೇಥಿಯವರು ಇಂದು ಲೋಕಸಭೆಯಲ್ಲಿ ತಿಳಿಸಿದರು.

ಅಧಿಕಾರಶಾಹಿಯು ಬ್ಯಾಂಕ್‌ ರಾಷ್ಟ್ರೀಕರಣದ ಮೂಲ ಉದ್ದೇಶವನ್ನು ವಿಫಲಗೊಳಿಸುವ ಕಾರ್ಯದಲ್ಲಿ ತೊಡಗಿದೆಯೆಂದು ಆಪಾದಿಸಿದ ಮೈಸೂರಿನ ಕೆ.ಲಕ್ಕಪ್ಪನವರು, ತಮ್ಮ ಕ್ಷೇತ್ರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕೊಂದರ ಏಜೆಂಟರೊಬ್ಬರು, ಮಂಜೂರು ಮಾಡಿದ ಪ್ರತಿ ಸಾಲದಲ್ಲೂ ಒಂದು ಪಾಲು ಕೇಳುತ್ತಿದ್ದಾರೆಂದು ನುಡಿದರು.

ADVERTISEMENT

ರಾಜಧನ ರದ್ದತಿಗೆ ಮಸೂದೆ ಮಂಡನೆ

ನವದೆಹಲಿ, ಮೇ 18– ರಾಜಧನ ರದ್ದತಿಗೆ ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ಮಸೂದೆಯ ಮಂಡನೆಗೆ ಲೋಕಸಭೆಯು ಇಂದು ಧ್ವನಿಮತದ ಮೂಲಕ ಒಪ್ಪಿಗೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.