ADVERTISEMENT

ಶುಕ್ರವಾರ, 21–2–1969

ಶುಕ್ರವಾರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 20:14 IST
Last Updated 20 ಫೆಬ್ರುವರಿ 2019, 20:14 IST

ಬಳ್ಳಾರಿ ಜಿಲ್ಲೆ ಕ್ರಾಂತಿಗೆ ‘ನಾಂದಿ’:ಸೊಂಡೂರಿನಲ್ಲಿ ಲೋಹ, ಮಿಶ್ರಲೋಹದ ಕಾರ್ಖಾನೆಯ ಉದ್ಘಾಟನೆ

ಹೊಸಪೇಟೆ, ಫೆ. 20:ಸುತ್ತ ಕೆಂಬಣ್ಣದ ಅದುರುಗುಡ್ಡ. ಒಂದೆಡೆ ವಿಶಾಲವಾದ ಜಲರಾಶಿ. ತುಂಗಭದ್ರೆಯ ಪಂಪಾ ಸರೋವರದ ತಡಿಯಲ್ಲಿ ಬಳ್ಳಾರಿ ಜಿಲ್ಲೆಯ ಕ್ರಾಂತಿಗೆ ಮೊದಲ ಹೆಜ್ಜೆ. ಲೋಹ ಮತ್ತು ಕಬ್ಬಿಣ ಮಿಶ್ರಲೋಹ ಕಾರ್ಖಾನೆ ಉದ್ಘಾಟನೆ.

ಮೂರು ಕೋಟಿ ರೂಪಾಯಿಗಳ ಈ ಯೋಜನೆಯನ್ನು ಭಾರತ ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಇಲ್ಲಿ ಪ್ರಾರಂಭಿಸಿದರು.

ADVERTISEMENT

ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರ ಅಧ್ಯಕ್ಷತೆಯಲ್ಲಿ ಸೊಂಡೂರು ಮ್ಯಾಂಗನೀಸ್– ಕಬ್ಬಿಣ ಅದುರುಗಳ ಸಂಸ್ಥೆಯ ಕಾರ್ಖಾನೆಯನ್ನು ಸಿದ್ದವ್ವನಹಳ್ಳಿಯವರು ಉದ್ಘಾಟಿಸಿದಾಗ ದೀಪಸ್ತಂಭ ಜ್ಯೋತಿಯಿಂದ ಬೆಳಗಿತು. ಮೇಲಿನಿಂದ ವಿಮಾನ ಪುಷ್ಪವೃಷ್ಟಿ ಮಾಡಿತು.

ಮಹಾರಾಷ್ಟ್ರೀಯರ ಬೆದರಿಕೆಗೆ ಸೊಪ್ಪು ಹಾಕದೆ ಮಹಾಜನ್ ವರದಿ ಜಾರಿಗೆ ಒತ್ತಾಯ

ನವದೆಹಲಿ, ಫೆ. 20:ಮಹಾರಾಷ್ಟ್ರದ ಕೆಲವು ನಾಯಕರ ಬೆದರಿಕೆಯಿದ್ದರೂ ಅದನ್ನು ಪರಿಗಣಿಸದೆ ಮಹಾಜನ್ ವರದಿಯನ್ನು ಕೂಡಲೇ ಜಾರಿಗೆ ತರಬೇಕೆಂದು ಮೈಸೂರಿನ ಪಾರ್ಲಿಮೆಂಟ್ ಸದಸ್ಯರು ಇಂದು ಪ್ರಧಾನಿಯನ್ನು ಆಗ್ರಹಪಡಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.