ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಬುಧವಾರ, 3–1–2023

​ಪ್ರಜಾವಾಣಿ ವಾರ್ತೆ
Published 2 ಜನವರಿ 2023, 19:45 IST
Last Updated 2 ಜನವರಿ 2023, 19:45 IST
   

ಸಂಪೂರ್ಣ ಆಂಧ್ರ ಬಂದ್‌, 3 ಸ್ಥಳಗಳಲ್ಲಿ ಐದು ಬಾರಿ ಗೋಲಿಬಾರ್‌: 3 ಸಾವು

ಹೈದರಾಬಾದ್‌, ಜ. 2– ಪ್ರತ್ಯೇಕ ಆಂಧ್ರ ಚಳವಳಿಗಾರರ ಉದ್ರಿಕ್ತ ಗುಂಪನ್ನು ಚದುರಿ ಸಲು 3 ಊರುಗಳಲ್ಲಿ– ನೆಲ್ಲೂರು, ಅನಂತಪುರ ಮತ್ತು ಮಚಲಿಪಟ್ಟಣ ಸಮೀಪದ ನಗಯಲಂಕಗಳಲ್ಲಿ ಐದು ಬಾರಿ ಪೊಲೀಸರು ಗುಂಡು ಹಾರಿಸಿದಾಗ ಮೂವರು ಮೃತಪಟ್ಟು, ಹಲವರು ಗಾಯಗೊಂಡರು. ಆಂಧ್ರ ವಲಯದ 12 ಜಿಲ್ಲೆಗಳಲ್ಲೂ ಇಂದು ಸಂಪೂರ್ಣ ಬಂದ್‌ ಆಚರಿಸಲಾಯಿತು.

ನೆಲ್ಲೂರಿನಲ್ಲಿ ಒಬ್ಬ, ಅನಂತಪುರ
ದಲ್ಲಿ ಇಬ್ಬರು ಗುಂಡಿಗೆ ಬಲಿಯಾದರೆಂದು ವರದಿ. ಈ ಎರಡು ಸ್ಥಳಗಳಲ್ಲಿ ಪೊಲೀಸರು ಎರಡೆರಡು ಬಾರಿ ಗುಂಡು ಹಾರಿಸಿದ್ದರು.

ADVERTISEMENT

ಭೂಸನೂರು ಮಠ ಅವರಿಗೆ
ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ನವದೆಹಲಿ, ಜ. 2– ಎಸ್‌.ಎಸ್‌.ಭೂಸನೂರು ಮಠ ಅವರ ‘ಶೂನ್ಯ ಸಂಪಾದನೆಯ ಪರಾಮರ್ಶೆ’ ವಿಮರ್ಶಾ ಕೃತಿಗೆ 1972ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿದೆ. 1972ರ ಡಿಸೆಂಬರ್‌ 30ರಂದು ಬೆಂಗಳೂರಿನಲ್ಲಿ ಅಕಾಡೆಮಿಯ ಅಧ್ಯಕ್ಷ ಡಾ.ಸುನೀತಿ ಕುಮಾರ್‌ ಚಟರ್ಜಿ ಅವರ ನಾಯಕತ್ವದಲ್ಲಿ ಸಭೆ ಸೇರಿದ್ದ ಅಕಾಡೆಮಿಯ ಕಾರ್ಯನಿರ್ವಾಹಕ ಮಂಡಲಿಯು 1972ರ ಪ್ರಶಸ್ತಿಗಾಗಿ 13 ಸಾಹಿತ್ಯ ಕೃತಿಗಳನ್ನು ಆಯ್ಕೆ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.