ADVERTISEMENT

50 ವರ್ಷಗಳ ಹಿಂದೆ: ಬುಧವಾರ, 17 ಜನವರಿ 1973

ಪ್ರಜಾವಾಣಿ ವಿಶೇಷ
Published 16 ಜನವರಿ 2023, 20:58 IST
Last Updated 16 ಜನವರಿ 2023, 20:58 IST
   

ಆಂಧ್ರ ಮುಖ್ಯಮಂತ್ರಿಗೆ ದೆಹಲಿ ತುರ್ತು ಕರೆ; ರಾಷ್ಟ್ರಪತಿ ಆಳ್ವಿಕೆ ಖಚಿತ
ನವದೆಹಲಿ, ಜ. 16–
ತೀವ್ರ ತೊಂದರೆಗೆ ಗುರಿಯಾಗಿರುವ ಆಂಧ್ರಪ್ರದೇಶವನ್ನು ಸ್ವಲ್ಪಕಾಲದವರೆಗಾದರೂ ರಾಷ್ಟ್ರಪತಿ ಆಡಳಿತಕ್ಕೆ ಒಳಪಡಿಸಬೇಕೆಂಬ ನಿರ್ಧಾರವನ್ನು ಇಂದು ಬೆಳಿಗ್ಗೆ ಇಲ್ಲಿ ಸಂಪುಟದ ರಾಜಕೀಯ ವ್ಯವಹಾರ ಸಮಿತಿ ಸಭೆಯಲ್ಲಿ ಎರಡು ಗಂಟೆಗಳ ದೀರ್ಘ ಚರ್ಚೆ ನಂತರ ಕೈಗೊಳ್ಳಲಾಯಿತೆಂದು ತಿಳಿದುಬಂದಿದೆ.

ಈ ಬಗೆಗೆ ರಾಷ್ಟ್ರಪತಿ ವಿ.ವಿ. ಗಿರಿ ಅವರಿಗೆ ಶಿಫಾರಸು ಮಾಡುವುದಕ್ಕೆ ಮುಂಚೆ ತುರ್ತು ಸಮಾಲೋಚನೆಗಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಪಿ.ವಿ. ನರಸಿಂಹ ರಾವ್‌ ಅವರು ದೆಹಲಿಗೆ ಧಾವಿಸಿದರು. ಅವರು ಉಮಾಶಂಕರ್‌ ದೀಕ್ಷಿತ್‌ ಅವರನ್ನು ಮೊದಲು ಭೇಟಿಯಾಗಿದ್ದರು.

ನಿರ್ಧಾರಕ್ಕೂ ಮುಂಚಿನ ಸಮಾಲೋಚನೆಯಲ್ಲಿ ಹಾಜರಿರುವುದಕ್ಕಾಗಿ ಇಂದು ರಾತ್ರಿ ಭೋಪಾಲ್‌ ಪ್ರವಾಸವನ್ನು ಕಾಂಗ್ರೆಸ್‌ ಅಧ್ಯಕ್ಷ ಡಾ. ಶಂಕರ ದಯಾಳ್‌ ಶರ್ಮ ಅವರು ರದ್ದು ಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.