ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 3–11–2022

ಪ್ರಜಾವಾಣಿ ವಿಶೇಷ
Published 2 ನವೆಂಬರ್ 2022, 19:45 IST
Last Updated 2 ನವೆಂಬರ್ 2022, 19:45 IST
   

ಕೋಮು ಶಕ್ತಿ ವಿರುದ್ಧ ಹೋರಾಟ; ಏಕತೆ ಸಾಧನೆಗೆ ಪ್ರಧಾನಿ ಕರೆ

ಮುಂಬೈ ನ. 2– ಕೋಮುವಾದ ಶಕ್ತಿಗಳ ವಿರುದ್ಧ ಹೋರಾಡಿ ದೇಶವನ್ನು ಪ್ರಗತಿ ಮತ್ತು ಏಕತೆಯತ್ತ ಕೊಂಡೊಯ್ಯಬೇಕು ಎಂದು ಪ್ರಧಾನಿ ಇಂದಿರಾಗಾಂಧಿ ಇಂದು ಜನತೆಗೆ ಕರೆ ನೀಡಿದರು.

ಇಲ್ಲಿ ‘ಮಹಾರಾಷ್ಟ್ರ ಸಾಂಪ್ರದಾಯಿಕ್ತಿ ವಿರೋಧಿ’ ಸಮ್ಮೇಳನದ (ಕೋಮು ವಿರೋಧಿರಂಗ) ಉದ್ಘಾಟನೆಯನ್ನು ನೆರವೇರಿಸುತ್ತಿದ್ದ ಅವರು ‘ಕೇವಲ ಶಾಸನಗಳಿಂದ ಏನನ್ನೂ ಸಾಧಿಸಲಾಗದು. ಜನತೆಯೇ ಕೋಮುವಾದ ವಿರುದ್ಧ ಹೋರಾಡಲು ಬೇಕಾದ ಏಕತೆಯನ್ನು ಮೂಡಿಸಬೇಕು’ ಎಂದು ಸೂಚಿಸಿದರು.

ADVERTISEMENT

ಏಕತೆಯಿಂದ, ದೇಶದ ಪ್ರಗತಿಗೆ ಯಾವ ಕ್ರಮ ಕೈಗೊಂಡರೂ ಅದು ಫಲಿಸದು. ಜನತೆ ನೆಮ್ಮದಿಯಿಂದ, ದ್ವೇಷಾಸೂಯೆಗಳಿಲ್ಲದೆ ಶಾಂತಿಯಿಂದ ಇದ್ದರೂ ಕೆಲವರು ಕೋಮುವಾದದ ವಿಷಬೀಜ ಬಿತ್ತಿ ವೈಷಮ್ಯದ ವಾತಾವರಣನ್ನು ಉಂಟು ಮಾಡುವರು. ಇಂತಹ ಮಾಡುವರು. ಇಂತಹ ಪ್ರವೃತ್ತಿಯನ್ನು ತಡೆಯುವುದೇ ಅಲ್ಲದೇ, ಜನತೆ ಅದರಿಂದ ತಪ್ಪುದಾರಿಗೆ ಎಳೆಯಲ್ಪಡಬಾರದು ಎಂದೂ ಕರೆ ನೀಡಿದರು.

ಖ್ಯಾತ ಕವಿ ಎಜ್ರಾಪೌಂಡ್‌ ನಿಧನ

ವೆನ್ನಿಸ್‌ (ಇಟಲಿ) ನ. 2– ಅಮೆರಿಕದಿಂದ ರಾಷ್ಟ್ರದ್ರೋಹ ಆಪಾದನೆಗೆ ಗುರಿಯಾಗಿ 14 ವರ್ಷಗಳ ಹಿಂದೆ ಇಲ್ಲಿ ಬಂದು ನೆಲೆಸಿದ ಖ್ಯಾತ ಕವಿ ಎಜ್ರಾಪೌಂಡ್‌ ಅವರು ಬುಧವಾರ ರಾತ್ರಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ನಿಧನ ಹೊಂದಿದರು. ಅವರಿಗೆ 83 ವರ್ಷ ವಯಸ್ಸಾಗಿತ್ತು. ಮಂಗಳವಾರ ಅವರನ್ನು ಇಲ್ಲಿನ ಸೇಂಟ್‌ ಜಾನ್‌ ಮತ್ತು ಪಾಲ್‌ ಆಸ್ಪತ್ರೆಗೆ ಸೇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.