ADVERTISEMENT

50 ವರ್ಷಗಳ ಹಿಂದೆ | ಮತ್ತೆ ಗಿರಿ ಸ್ಪರ್ಧೆ ಇಲ್ಲ: ವಿರೋಧ ಪಕ್ಷಗಳ ಯತ್ನ ವಿಫಲ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 22:47 IST
Last Updated 14 ಜುಲೈ 2024, 22:47 IST
50 ವರ್ಷಗಳ ಹಿಂದೆ
50 ವರ್ಷಗಳ ಹಿಂದೆ   

ಮತ್ತೆ ಗಿರಿ ಸ್ಪರ್ಧೆ ಇಲ್ಲ: ವಿರೋಧ ಪಕ್ಷಗಳ ಯತ್ನ ವಿಫಲ

ನವದೆಹಲಿ, ಜುಲೈ 14– ಮತ್ತೆ ಸ್ಪರ್ಧಿಸುವಂತೆ ಗಿರಿ ಅವರನ್ನು ಭೇಟಿ ಮಾಡಿ ಅವರ ಮನ ಒಲಿಸಲು ಆರು ವಿರೋಧಿ ಪಕ್ಷಗಳ ಪ್ರತಿನಿಧಿಗಳು ಇಂದು ನಡೆಸಿದ ಪ್ರಯತ್ನ ಫಲಿಸಲಿಲ್ಲ.

ರಾಷ್ಟ್ರಪತಿ ಸ್ಥಾನಕ್ಕೆ ಎರಡನೇ ಬಾರಿ ಸ್ಪರ್ಧಿಸಬಾರದೆಂದು ಈಗಾಗಲೇ ಕೈಗೊಂಡ ನಿರ್ಧಾರವನ್ನು ನಿಯೋಗಕ್ಕೆ ತಿಳಿಸಿದ ಗಿರಿ ಅವರು ಅವರ ಮನವಿಯನ್ನು ತಿರಸ್ಕರಿಸಿದರು.

ADVERTISEMENT

ಶ್ರೀಮಂತ ರೈತರ ಮೇಲೆ ಹೆಚ್ಚು ತೆರಿಗೆ ಕುರಿತು ಪರಿಶೀಲನೆ – ಅರಸು

ಬೆಂಗಳೂರು, ಜುಲೈ 14– ಹಣವಂತ ರೈತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮಾರ್ಗ ಕುರಿತು ಪರಿಶೀಲನೆ ನಡೆಯಬೇಕಾಗಿದೆ
ಯೆಂದು ಮುಖ್ಯಮಂತ್ರಿ ಶ್ರೀ ಅರಸು ಅವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಹಣದುಬ್ಬರವನ್ನು ಕಡಿಮೆ ಮಾಡಲು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಸಲಹೆ ಮಾಡಿದ ನಾನಾ ಕ್ರಮಗಳನ್ನು ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರವಿತ್ತು, ಹಣವಂತ ರೈತರಿಂದ ಹೆಚ್ಚು ಆದಾಯ ಪಡೆಯಲು ಯತ್ನಿಸಬೇಕೆಂಬ ಬಗ್ಗೆ ಎರಡು ಅಭಿಪ್ರಾಯವಿಲ್ಲವೆಂದು ಸ್ಪಷ್ಟಪಡಿಸಿ ‘ಯಾವ ಮಾರ್ಗದಲ್ಲಿ ಈ ಕೆಲಸ ಮಾಡಬೇಕಾಗಿದೆ ಎಂಬುದನ್ನು ಪರಿಶೀಲಿಸ
ಬೇಕಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.