ಬಿಹಾರ: ರೈಲುಗಳ ಮೇಲೆ ದಾಳಿ, ಬೆಂಕಿ; ಗುಂಡೇಟಿನಿಂದ ನಾಲ್ವರ ಸಾವು
ಪಟನಾ, ಮಾರ್ಚ್ 20– ಬಿಹಾರದ ರಾಜಧಾನಿಯಲ್ಲಿ ತ್ವರಿತವಾಗಿ ಶಾಂತಿಯುಂಟಾಗುತ್ತದೆಂದು ಕಂಡುಬಂದಾಗ್ಯೂ ರಾಜ್ಯದ ನಾನಾ ಭಾಗಗಳಲ್ಲಿ ರೈಲು ಹಾಗೂ ಸರ್ಕಾರಿ ಕಚೇರಿಗಳ ಮೇಲೆ ದಾಳಿ, ಅಗ್ನಿಸ್ಪರ್ಶ ಹಾಗೂ ಲೂಟಿ ಪ್ರಕರಣಗಳು ನಡೆದುದು ವರದಿಯಾಗಿದೆ. ಮುಂಘೇರ್ ಜಿಲ್ಲೆಯ ಲಖಿಸರಾಯ್
ಹಾಗೂ ಸೀತಾನುರ್ಹಿ ಜಿಲ್ಲೆಯ ಬೈರ್ಗಾನಿಯದಲ್ಲಿ ಪೊಲೀಸರ ಗುಂಡಿನಿಂದ 4 ಮಂದಿ ಸತ್ತು, ಇತರ 6 ಮಂದಿ ಗಾಯಗೊಂಡಿದ್ದಾರೆ.
ರೈಲು ನಿಲ್ದಾಣಗಳು, ಗೂಡ್ಸ್‌ಶೆಡ್‌ಗಳ ಮೇಲೆ ಉದ್ರಿಕ್ತ ಗುಂಪುಗಳು ಮುಖ್ಯವಾಗಿ ದಾಳಿಯಿಟ್ಟವು. ಅನೇಕ ಕಡೆ ಅವುಗಳಿಗೆ ಬೆಂಕಿ ಹಚ್ಚಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.