ಸಾಧ್ಯವಾದರೆ ಹೆಚ್ಚು ಸರ್ಕಾರಿ ಸಮಾರಂಭಕ್ಕೆ ಪ್ರಧಾನಿ ಸಿದ್ಧ
ನವದೆಹಲಿ, ಜುಲೈ 15– ಮೈಸೂರು ರಾಜ್ಯದಲ್ಲಿ ತಮ್ಮ ಪ್ರವಾಸ ಕಾಲದಲ್ಲಿ ಕಾರ್ಯಕ್ರಮದಲ್ಲಿ ಅಳವಡಿಸಲು ಸಾಧ್ಯವಾಗುವುದಾದರೆ, ಹೆಚ್ಚಿನ ಅಧಿಕೃತ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಮ್ಮ ಅಭ್ಯಂತರವೇನಿಲ್ಲ ಎಂದು ಪ್ರಧಾನಿ ಇಂದಿರಾ ಗಾಂಧಿಯವರು ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲ್ ಮತ್ತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.
ತಮ್ಮ ಮೂರು ದಿನಗಳ ಪ್ರವಾಸ ಕಾಲದಲ್ಲಿ ಸಾಧ್ಯವಾದರೆ ಇತರ ಕಾರ್ಯಕ್ರಮಗಳನ್ನು ರದ್ದುಪಡಿಸಿ ಮೈಸೂರು ಸರ್ಕಾರ ಏರ್ಪಡಿಸಲು ಬಯಸಿರುವ ಇನ್ನೂ ಕೆಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಮಗೆ ತುಂಬಾ ಸಂತೋಷ ಎಂದೂ ಪ್ರಧಾನಿಯವರು ಹೇಳಿದ್ದಾರೆ.
ಪ್ರವಾಸ ಕಾರ್ಯಕ್ರಮದ ಬಗ್ಗೆ ವೀರೇಂದ್ರ ಪಾಟೀಲರು ತಮ್ಮ ನಿರಾಶೆವ್ಯಕ್ತಪಡಿಸಿದರೆಂಬ ವರದಿ ಬಂದ ನಂತರ ಈ ಪತ್ರವನ್ನು ಬರೆಯಲಾಗಿದೆ. ಪ್ರಧಾನಿಯವರ ಪ್ರವಾಸ ಕಾರ್ಯಕ್ರಮದ ಕುರಿತು ವೀರೇಂದ್ರ ಪಾಟೀಲರು ನಿರಾಶೆ ವ್ಯಕ್ತಪಡಿಸಿದ ಬಗ್ಗೆ ಪ್ರಧಾನಿಯ ಸಮೀಪ ವಲಯಗಳಲ್ಲಿ ಅಚ್ಚರಿ ಮೂಡಿದೆ.
ಮತದಾನದ ವಯೋಮಿತಿ ಇಳಿಕೆಗೆ ಒತ್ತಾಯ ಸಂಭವ
ಬೆಂಗಳೂರು, ಜುಲೈ 15– ಮೈಸೂರಿನಲ್ಲಿ ಜುಲೈ 20ರಂದು ಪ್ರಧಾನಿ ಉದ್ಘಾಟಿಸುವ ಆಡಳಿತ ಕಾಂಗ್ರೆಸ್ಸಿನ ರಾಜ್ಯ ರಾಜಕೀಯ ಸಮ್ಮೇಳನವು ಮತದಾನದ ವಯೋಮಿತಿಯನ್ನು 21ರಿಂದ 18 ವರ್ಷಕ್ಕಿಳಿಸಬೇಕೆಂದು ಒತ್ತಾಯ ಮಾಡುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.