ಸಿಕ್ಕಿಂಗೆ ಸಂಸತ್ತಿನಲ್ಲಿ ಪ್ರಾತಿನಿಧ್ಯ ಸಂವಿಧಾನ ತಿದ್ದುಪಡಿ ಮಂಡನೆ
ನವದೆಹಲಿ, ಸೆ. 2– ಸಿಕ್ಕಿಂಗೆ ಸಹ–ಸ್ಥಾನಮಾನ ಕಲ್ಪಿಸಿ ಸಂಸತ್ತಿನಲ್ಲಿ ಅದರ ಪ್ರಾತಿನಿಧ್ಯಕ್ಕೆ ಅವಕಾಶ ನೀಡುವ ಸಂವಿಧಾನ ತಿದ್ದುಪಡಿ ವಿಧೇಯಕವನ್ನು ಇಂದು ಲೋಕಸಭೆಯಲ್ಲಿ ಮಂಡಿಸಲಾಯಿತು.
‘ಪ್ರಜಾಪ್ರಭುತ್ವಕ್ಕೆ ಸಿಕ್ಕಿಂ ಜನತೆಯ ಒತ್ತಾಯಕ್ಕಿದು ಸಕ್ರಿಯವಾದ ಪ್ರತಿಕ್ರಿಯೆ’ ಎಂದು ಅದನ್ನು ಮಂಡಿಸಿದ ವಿದೇಶಾಂಗ ಸಚಿವ ಸ್ವರಣ್‌ಸಿಂಗ್ ಹೇಳಿದರು.
6 ರೂಪಾಯಿಗೆ ಒಂದು ಮಗು
ರಾಯದುರ್ಗ, ಸೆ. 2– ಬಡತನದ ಬೇಗೆಯಿಂದಾಗಿ ಹೆತ್ತ ತಾಯಿಯೇ ತನ್ನ ಮಗುವನ್ನು ಕೇವಲ 6 ರೂ.ಗಳಿಗೆ ಮಾರಾಟ ಮಾಡಿದ ಪ್ರಕರಣ ರಾಶಿಬಡವಂಶ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ಕೂಲಿಯೊಬ್ಬನ ಪತ್ನಿ ಏಲಕ್ಕ ಎಂಬಾಕೆ ಇಂದು ತನ್ನ ಎರಡು ತಿಂಗಳ ಗಂಡುಮಗುವನ್ನು ವಡ್ಡೆ ತಿಮ್ಮಪ್ಪ ಎಂಬಾತನಿಗೆ 6 ರೂ.ಗಳಿಗೆ ಮಾರಾಟ ಮಾಡಿದಳೆಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.