ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 15–09–1972

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 19:30 IST
Last Updated 14 ಸೆಪ್ಟೆಂಬರ್ 2022, 19:30 IST
   

l ಜಾಡಮಾಲಿ ಅಲ್ಲ; ಪೌರಕಾರ್ಮಿಕ

ಬೆಂಗಳೂರು, ಸೆಪ್ಟೆಂಬರ್‌ 14– ಇನ್ನು ಮುಂದೆ ಜಾಡಮಾಲಿಗಳನ್ನು ‘ಪೌರಕಾರ್ಮಿಕರು’ ಎಂದು ಕರೆಯಲಾಗುವುದು. ಇದಕ್ಕಾಗಿ ರಾಜ್ಯ ಸರ್ಕಾರ ಸದ್ಯದಲ್ಲಿಯೇ ಆಜ್ಞೆ ಹೊರಡಿಸಲಿದೆಯೆಂದು ಪೌರಾಡಳಿತ ಸಚಿವ ಬಿ. ಬಸವಲಿಂಗಪ್ಪನವರು ಇಂದು ವರದಿಗಾರರಿಗೆ ತಿಳಿಸಿದರು.

l ರಾಜ್ಯದ ನಾಲ್ಕು ಬೃಹತ್‌ ನೀರಾವರಿ ಯೋಜನೆಗಳಿಗೆ ಕೇಂದ್ರ ನೆರವು ಖಚಿತ

ADVERTISEMENT

ಬೆಂಗಳೂರು, ಸೆಪ್ಟೆಂಬರ್‌ 14– ಮಲಪ್ರಭಾ, ಘಟಪ್ರಭಾ, ಕೃಷ್ಣಾ ಮೇಲ್ದಂಡೆ ಮತ್ತು ಹೇಮಾವತಿ ಯೋಜನೆಗಳನ್ನು ಹತ್ತಾರು ವರ್ಷಗಳಿಗೆ ಲಂಬಿಸುವ ಬದಲು ಐದಾರು ವರ್ಷಗಳಲ್ಲಿಯೇ ಮುಗಿಸಲು ಬೇಕಾದ 165 ಕೋಟಿ ರೂ.ಗಳನ್ನು ಕೇಂದ್ರವು ರಾಜ್ಯಕ್ಕೆ ಕೊಡುವ ಸಾಧ್ಯತೆ ಇದೀಗ ಉಜ್ವಲವಾಗಿದೆ.

ಆಹಾರ ಉತ್ಪಾದನೆ ದಿಸೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳ ದೃಷ್ಟಿಯಲ್ಲಿ ಮಹತ್ವ ಪಡೆದಿರುವ‌ ಈ ನಾಲ್ಕು ಯೋಜನೆಗಳಿಗೆ ಪರಿಶೀಲನೆ ಹಾಗೂ ಭಾವೀ ಕ್ರಮಗಳ ನಿರ್ಧಾರಕ್ಕಾಗಿ ಡಾ. ಎಂ.ಎಸ್‌. ಸ್ವಾಮಿನಾಥನ್‌ರ ನೇತೃತ್ವದಲ್ಲಿ ತಜ್ಞರ ತಂಡವೊಂದು ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ದೇವರಾಜ ಅರಸು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.