ADVERTISEMENT

50 ವರ್ಷದ ಹಿಂದೆ | ಮಾರ್ಚ್‌ 14, 1973

ಪ್ರಜಾವಾಣಿ ವಿಶೇಷ
Published 13 ಮಾರ್ಚ್ 2023, 22:20 IST
Last Updated 13 ಮಾರ್ಚ್ 2023, 22:20 IST
   

ಜನಸಂಘದಿಂದ ಬಲರಾಜ ಮಧೋಕ್ ಉಚ್ಚಾಟನೆ
ನವದೆಹಲಿ, ಮಾರ್ಚ್‌ 13–
ಜನಸಂಘದ ಮಾಜಿ ಅಧ್ಯಕ್ಷ ಬಲರಾಜ ಮಧೋಕ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮೂರು ವರ್ಷಗಳ ಕಾಲ ತೆಗೆದು ಹಾಕಲಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಭಂಡಾರಿ ಅವರು ಇಂದು ಇಲ್ಲಿ ಪ್ರಕಟಿಸಿದರು.

‘ಪಕ್ಷ ವಿರುದ್ಧದ ಚಟುವಟಿಕೆಗಳು ಮತ್ತು ಹೇಳಿಕೆಗಳಲ್ಲಿ’ ಮಧೋಕ್ ತೊಡಗಿದ್ದುದೇ ಅವರ ಉಚ್ಚಾಟನೆಗೆ ಕಾರಣವೆಂದು ಭಂಡಾರಿ ಹೇಳಿದರು.

ಕಳೆದ ತಿಂಗಳು ಕಾನ್ಪುರದಲ್ಲಿ ಪಕ್ಷದ ಜನರಲ್‌ ಕೌನ್ಸಿಲ್‌ ಅಂಗೀಕರಿಸಿದ ನಿರ್ಣಯವನ್ನನುಸರಿಸಿ ಪಕ್ಷದ ಅಧ್ಯಕ್ಷ ಎಲ್‌.ಕೆ. ಅಡ್ವಾಣಿಯವರು ಈ ಕ್ರಮ ಕೈಗೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಪಾಕ್‌ಗೆ ಅಮೆರಿಕ ಶಸ್ತ್ರಾಸ್ತ್ರ: ಲೋಕಸಭೆ ಸದಸ್ಯರ ಕಳವಳ
ನವದೆಹಲಿ, ಮಾರ್ಚ್‌ 13–
ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಸರಬರಾಜು ಪುನರಾರಂಭಿಸಲು ಅಮೆರಿಕ ಆಲೋಚಿಸುತ್ತಿದೆಯೆಂಬ ವರದಿ ಕುರಿತು ಲೋಕಸಭೆಯಲ್ಲಿ ಇಂದು ಎಲ್ಲ ಪಕ್ಷಗಳ ಸದಸ್ಯರೂ ತೀವ್ರ ಕಳವಳ ವ್ಯಕ್ತಪಡಿಸಿ, ಈ ವಿಷಯದಲ್ಲಿ ಸರ್ಕಾರ ಶೀಘ್ರವೇ ಹೇಳಿಕೆ ಕೊಡುವಂತೆ ಒತ್ತಾಯ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.