ಬೆಂಗಳೂರು, ಆ– 6: ಮೂವತ್ತು ವರ್ಷಗಳ ಕಾಲ ದೀರ್ಘ ಸೇವೆ ಸಲ್ಲಿಸಿದ ನಂತರ ವರ್ಷಗಟ್ಟಲೆ ವಿಶ್ರಾಂತಿ ವೇತನಕ್ಕಾಗಿ ಕಂಬ ಕಂಬಕ್ಕೂ ಅಲೆಯಬೇಕಾಗಿರುವ ಸರ್ಕಾರದ ಹಿರಿಯ ಹಾಗೂ ಕಿರಿಯ ಅಧಿಕಾರಿಗಳ ಬವಣೆ ತಪ್ಪಿಸಲು ಸೇವೆಗೆ ಸೇರಿದ ದಿನ ಹಾಗೂ ನಿವೃತ್ತಿಯ ದಿನಾಂಕ ಪರಿಗಣಿಸಿ ನಿವೃತ್ತಿಯ ಹದಿನೆಂಟು ತಿಂಗಳ ಮೊದಲೇ ಸಂಬಂಧಪಟ್ಟ ಕಾಗದ ಪತ್ರಗಳನ್ನು ತಯಾರಿಸುವ ವ್ಯವಸ್ಥೆ ಮಾಡಲು ಸರ್ಕಾರ ಯೋಚಿಸಿದೆ.
ಕರ್ನಾಟಕ ಸರ್ಕಾರಿ ನೌಕರರ ಸೇನಾ ನಿಯಮಗಳಿಗೆ ಸೂಕ್ತ ತಿದ್ದುಪಡಿ ಮಾಡಿ ನಿವೃತ್ತಿಯ ಹನ್ನೆರಡು ತಿಂಗಳ ಮೊದಲೇ ಕಾಗದ ಪತ್ರಗಳು ಅಕೌಂಟೆಂಟ್ ಜನರಲ್ ಅವರ ಕಚೇರಿಗೆ ತಲುಪುವಂತೆ ಮಾಡಬೇಕೆಂಬುದೇ ಅದರ ಉದ್ದೇಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.