ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ 26–11–1971

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 20:15 IST
Last Updated 25 ನವೆಂಬರ್ 2021, 20:15 IST
   

ಎರಡು ಲಕ್ಷ ಡಾಲರ್ ಆಕಾಶ ದರೋಡೆ

ರೇನೋ, ನೆವಾಡಾ, ನ. 24– ವಿಮಾನದಲ್ಲಿ ಬಾಂಬ್ ತೋರಿಸಿ, ಎರಡು ಲಕ್ಷ ಡಾಲರ್ ಪಡೆದು ಯಾನ ಮಧ್ಯದಲ್ಲಿಯೇ ವಿಮಾನದಿಂದ ನಾಪತ್ತೆಯಾದ ಒಂದು ಪ್ರಕರಣ ವರದಿಯಾಗಿದೆ.

’ನಾರ್ತ್ ವೆಸ್ಟ್ ಏರ್‌ಲೈನ್ಸ್‌‘ನ 727ಜೆಟ್‌ ವಿಮಾನವೊಂದು ವಾಷಿಂಗ್ಟನ್‌ನಿಂದ ಸಿಯಾಟಲ್‌ಗೆ ಹೊರಟಿತ್ತು.

ADVERTISEMENT

ವಿಮಾನ ಅಪಹರಿಸಲು ಪ್ರಯತ್ನಿಸಿದವನು ಆರಗಾನ್ ಪೋರ್ಟ್‌ಲ್ಯಾಂಡ್‌ನಲ್ಲಿ ವಿಮಾನ ಹತ್ತಿ ಪೆಟ್ಟಿಗೆಯೊಂದಕ್ಕೆ ಜೋಡಿಸಿದ್ದ ತಂತಿಗಳಿದ್ದ ಕೊಳವೆಗಳನ್ನು ಚಾಲಕನಿಗೆ ತೋರಿಸಿ ಬೆದರಿಸಿದನು. ಅವನ ಎರಡು ಲಕ್ಷ ಡಾಲರ್‌ಗಳು ಮತ್ತು ನಾಲ್ಕು ಪ್ಯಾರಾಚೂಟ್‌ಗಳಿಗೆ ಒತ್ತಾಯ ಹಾಕಿದನು.

ಚಾಲಕನು ಸಿಯಾಟಲ್ ಮೇಲೆ ಎರಡು ಗಂಟೆ ಕಾಲ ಹಾರಟ ನಡೆಸಿ ’ಒಳಗಡೆ ತನಗೆ ಯಾವುದೋ ಒಂದು ಸಮಸ್ಯೆ‘ ಇದೆಯೆಂದು 36 ಜನ ಪ್ರಯಾಣಿಕರಿಗೆ ತಿಳಿಸಿದನು.

ಪ್ರಯಾಣಿಕರೂ, ಮೂವರು ಗಗನ ಸಖಿಯರಲ್ಲಿ ಇಬ್ಬರೂ ಸಿಯಾಟಲ್‌ನಲ್ಲಿ ಇಳಿದರು. ಇನ್ನೊಬ್ಬ ಗಗನ ಸಖಿಯನ್ನು ವಿಮಾನ ಅಪಹರಿಸಲು ಯತ್ನಿಸಿದವನು ಒತ್ತೆಯಾಗಿ ಇಟ್ಟುಕೊಂಡನು.

ವಿಮಾನವು ಸಿಯಾಟಲ್‌ನಲ್ಲಿ ಪೆಟ್ರೋಲ್ ತುಂಬಿಕೊಂಡು ಹೊರಟಾಗ ಅದರಲ್ಲಿ ಚಾಲಕ ವರ್ಗದವರು ಮತ್ತು ಅದನ್ನು ಅಪಹರಿಸಲು ಯತ್ನಿಸಿದವನು ಮಾತ್ರ ಇದ್ದರು. ವಿಮಾನದ ಹಿಂದಿನ ಬಾಗಿಲಿಗೆ ಬೀಗ ಹಾಕಿರಕೂಡದೆಂದೂ ಆಗಂತುಕ ತಿಳಿಸಿದ್ದನು. ಅವನು ಎರಡು ಲಕ್ಷ ಡಾಲರ್‌ಗಳೊಡನೆ ಪ್ಯಾರಾಚೂಟ್‌ನಲ್ಲಿ ಇಳಿದು ಬಿಟ್ಟಿರಬಹುದೆಂದು ಭಾವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.