ADVERTISEMENT

ಬಿಹಾರ ಸಂಪುಟ ರಚನೆ ಹಗರಣ ರಾಮಗಢ ರಾಜರಿಂದ ರಾಜೀನಾಮೆ ಸಂಭವ

ವಾರ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2019, 17:51 IST
Last Updated 9 ಮಾರ್ಚ್ 2019, 17:51 IST

ಬಿಹಾರ ಸಂಪುಟ ರಚನೆ ಹಗರಣ ರಾಮಗಢ ರಾಜರಿಂದ ರಾಜೀನಾಮೆ ಸಂಭವ

ನವದೆಹಲಿ, 9– ಬಿಹಾರದ ಸಂಪುಟಕ್ಕೆ ಸೇರಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಭಾರಿ ಬಿಕ್ಕಟ್ಟಿಗೆ ಎಡೆಕೊಟ್ಟ ರಾಮಗಢದ ರಾಜರು ಸಚಿವ ಸ್ಥಾನಕ್ಕೆ ರಾಜಿನಾಮೆ ಕೊಡಲು ಒಪ್ಪಿದ್ದಾರೆಂದು ಗೊತ್ತಾಗಿದೆ.

ರಾಜಿನಾಮೆ ಕೊಡುವಂತೆ ಮುಖ್ಯಮಂತ್ರಿ ಶ್ರೀ ಹರಿಹರ ಸಿಂಗ್ ಅವರು ಅವರನ್ನು ಒಲಿಸಿದ್ದಾರೆಂದು ತಿಳಿದು ಬಂದಿದೆ. ರಾಮಗಢ ರಾಜರು ಸೋಮವಾರ ಅಥವಾ ಮಂಗಳವಾರ ರಾಜಿನಾಮೆ ಸಲ್ಲಿಸುವ ನಿರೀಕ್ಷೆ ಇದೆ.

ADVERTISEMENT

ಆದರೆ ಅವರು ರಾಜಿನಾಮೆ ಕೊಡುವವರೆಗೆ ಅದು ಖಚಿತವಿಲ್ಲ. ಅವರ ಹಿಂದಿನ ನಡವಳಿಕೆ ಹಿನ್ನೆಲೆ ಗಮನಿಸಿದರೆ ಅವರು ಸ್ವಂತ ಇಚ್ಛೆಯಿಂದ ಅಧಿಕಾರ ತ್ಯಜಿಸುವರೇ... ಎಂಬ ಬಗೆಗೆ ಕಾಂಗ್ರೆಸ್ ವಲಯಗಳಲ್ಲಿ ಅನುಮಾನವಿದೆ. ಬೇಸರದಿಂದ ರಾಜೀನಾಮೆ ಕೊಟ್ಟ ಭೋಲಾ ಪಾಸ್ವಾನ್ ಶಾಸ್ತ್ರಿ ಸಂಪುಟದಲ್ಲಿದ್ದಾಗ ಅವರು ಒಂದೇ ದಿನದಲ್ಲಿ ಎರಡು ಭಾರಿ ಮನಸ್ಸು ಬದಲಾಯಿಸಿದವರು.

ಸೂಯೆಜ್‌ ಬಳಿ ಕದನ ಈಜಿಪ್ಟ್ ತೈಲ ರಾಕೆಟ್ ಕೇಂದ್ರಗಳಿಗೆ ಪೆಟ್ಟು

ಬೈರೂತ್, ಮಾ. 9– ಸೂಯೆಜ್ ಕಾಲುವೆ ಯುದ್ಧಕ್ಕೂ ಇಸ್ರೇಲ್ ಮತ್ತು ಅರಬ್ ಸೇನೆಗಳ ನಡುವೆ ಎರಡನೆಯ ದಿನವಾದ ಇಂದೂ ಭೀಕರ ಗುಂಡಿನ ಕಾಳಗ ನಡೆದಿದ್ದು ಇಸ್ರೇಲಿಗಳ ಷೆಲ್ ದಾಳಿಯಿಂದ ಈಜಿಪ್ಟಿನ ಮೂರು ಶೈಲ ಶುದ್ಧೀಕರಣ ಕೇಂದ್ರಗಳಿಗೆ ಹಾನಿಯುಂಟಾಗಿದೆ, ಮೂರು ತೈಲ ಟ್ಯಾಂಕುಗಳು ಹೊತ್ತಿಕೊಂಡು ಉರಿಯುತ್ತಿವೆಯೆಂದು ಕೈರೋ ರೇಡಿಯೋ ವರದಿ ತಿಳಿಸಿದೆ.

ಇಸ್ರೇಲ್ ಪಡೆಗಳು ಮದ್ದು, ಗುಂಡು ಮತ್ತು ಮಾರ್ಟರ್ ದಾಳಿ ನಡೆಸುತ್ತಿದ್ದು ಈಜಿಪ್ಟ್ ಪಡೆಗಳು ಪ್ರತಿಯಾಗಿ ಗುಂಡು ಹಾರಿಸಿದವೆಂದು ಈಜಿಪ್ಟ್ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ಶಿವಸೇನೆ ನಿಷೇಧಕ್ಕೆ ಕಾನೂನು ತೊಡಕು ಪ್ರಧಾನಿ ಅಭಿಮತ

ಬೆಂಗಳೂರು, ಮಾ. 9– ಶಿವಸೇನೆಯಂತಹ ‘ಶಾಂತಿಗೆ ಭಂಗತರುವ’ ಸಂಸ್ಥೆಗಳನ್ನು ಕಾನೂನು ಬಾಹಿರವೆಂದು ಘೋಷಿಸುವ ಬಗ್ಗೆ ಕೆಲವು ಕಾನೂನು ತೊಡಕುಗಳು ಇರಬಹುದೆಂದು ಪ್ರಧಾನಿ ಇಂದಿರಾಗಾಂಧಿಯವರು ಭಾವಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.