ADVERTISEMENT

50 ವರ್ಷಗಳ ಹಿಂದೆ: ಭಾರತದಿಂದ ಹಸ್ತಕ್ಷೇಪ: ಪಾಕ್

ಶುಕ್ರವಾರ 2–4–1971

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2021, 19:30 IST
Last Updated 1 ಏಪ್ರಿಲ್ 2021, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಭಾರತದಿಂದ ಹಸ್ತಕ್ಷೇಪ: ಪಾಕ್

ನವದೆಹಲಿ, ಏ. 1– ಬಾಂಗ್ಲಾ ಸ್ವಾತಂತ್ರ್ಯಾಕಾಂಕ್ಷಿಗಳಿಂದ ಬಿಗಿ ಹೋರಾಟ ಎದುರಿಸುತ್ತಿರುವ ಪಾಕಿಸ್ತಾನಿ ಆಡಳಿತವು ಈಗ ಆಪಾದನೆಗಳನ್ನೆಲ್ಲ ಭಾರತದ ಮೇಲೆ ಹೊರಿಸಲು ಆರಂಭಿಸಿದೆ.

ಬಾಂಗ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಸಹಾನುಭೂತಿ ಮತ್ತು ಬೆಂಬಲ ವ್ಯಕ್ತಪಡಿಸಿರುವ ಭಾರತ ಪಾರ್ಲಿಮೆಂಟ್‌ನ ಅವಿರೋಧ ನಿರ್ಣಯವು ‘ಪಾಕ್‌ ವ್ಯವಹಾರದಲ್ಲಿ ಹಸ್ತಕ್ಷೇಪ’ ಮಾಡಿದೆಯೆಂದು ಪಾಕ್‌ ರೇಡಿಯೊ ಬಿತ್ತರಿಸಿದೆ.

ADVERTISEMENT

ಮುಜೀಬುರ್ ಬಂಧನ ವರದಿ ಶುದ್ಧ ಸುಳ್ಳು: ನಿಕಟವರ್ತಿ ಸ್ಪಷ್ಟನೆ

ಕಲ್ಕತ್ತ, ಏ. 1– ಸ್ವತಂತ್ರ ಬಾಂಗ್ಲಾದೇಶ ಚಳವಳಿ ನಾಯಕ ಷೇಖ್‌ ಮುಜೀಬುರ್‌ ರಹಮಾನ್‌ ಅವರನ್ನು ಬಂಧಿಸಿ ಲಾಹೋರಿಗೆ ಒಯ್ಯಲಾಗಿದೆಯೆಂಬ ಲಂಡನ್‌ ವರದಿಗಳನ್ನು ‘ಆಧಾರರಹಿತ’ವೆಂದು ರಹಮಾನ್‌ರವರ ನಿಕಟವರ್ತಿ ಅಮಿ ಅಹ್ಮದ್‌ ಅಬ್ಜಲುರ್‌ ರಷೀದ್‌ ಕರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.