ADVERTISEMENT

50 ವರ್ಷಗಳ ಹಿಂದೆ: ಭಾನುವಾರ, 9-5-1971

​ಪ್ರಜಾವಾಣಿ ವಾರ್ತೆ
Published 8 ಮೇ 2021, 19:31 IST
Last Updated 8 ಮೇ 2021, 19:31 IST
   

ನಿರಾಶ್ರಿತರ ಸಮಸ್ಯೆ: ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಗಡಿ ರಾಜ್ಯಗಳ ಮನವಿ

ಕಲ್ಕತ್ತ, ಮೇ 8– ಬಾಂಗ್ಲಾದೇಶದಿಂದ ಭಾರಿ ಪ್ರಮಾಣದಲ್ಲಿ ವಲಸೆ ಬರುತ್ತಿರುವ ನಿರಾಶ್ರಿತರ ಹೊಣೆಯನ್ನು ಭಾರತದೊಂದಿಗೆ ಹಂಚಿಕೊಳ್ಳಲು ಮಾನವೀಯ ದೃಷ್ಟಿಯಿಂದ ಮುಂದೆ ಬರಬೇಕೆಂದು ಬಿಹಾರ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ತ್ರಿಪುರಾಗಳ ಮುಖ್ಯಮಂತ್ರಿಗಳು ಅಂತರರಾಷ್ಟ್ರೀಯ ಸಂಸ್ಥೆಗಳಿಗೆ ಮತ್ತು ಸ್ವತಂತ್ರ ರಾಷ್ಟ್ರಗಳಿಗೆ ಜಂಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.

ನಿರಾಶ್ರಿತರ ವಲಸೆಯಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಈ ಐದೂ ರಾಜ್ಯಗಳು ಮೂರು ಗಂಟೆ ಕಾಲ ನಡೆಸಿದ ಮಾತುಕತೆ ಅಂತ್ಯದಲ್ಲಿ ಈಮನವಿಯನ್ನು ಮಾಡಲಾಯಿತು. ಈಗಾಗಲೇ ನಿರಾಶ್ರಿತರ ಸಂಖ್ಯೆ 18 ಲಕ್ಷ ದಾಟಿದೆ. ಶೀಘ್ರದಲ್ಲಿಯೇ ಇದು 20 ಲಕ್ಷ ದಾಟಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.