ADVERTISEMENT

50 ವರ್ಷಗಳ ಹಿಂದೆ: ಶುಕ್ರವಾರ, 7-5-1971

​ಪ್ರಜಾವಾಣಿ ವಾರ್ತೆ
Published 6 ಮೇ 2021, 19:30 IST
Last Updated 6 ಮೇ 2021, 19:30 IST
   

ಗಾಂಧೀಜಿ ಅವರ ಉಗ್ರ ಕ್ರಮದ ವಿರುದ್ಧ 1942ರಲ್ಲೇ ಬ್ರಿಟಿಷ್‌ ಸರ್ಕಾರಕ್ಕೆ ಎಚ್ಚರಿಕೆ

ಲಂಡನ್‌, ಮೇ 6– ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮ ಗಾಂಧಿಯವರು ಬ್ರಿಟನ್ನಿಗೆ ಪ್ರತಿಕೂಲಕರವಾದ ಉಗ್ರ ಕ್ರಮಗಳನ್ನು ಕೈಗೊಳ್ಳುವ ಸಂಭವವಿದೆಯೆಂದು ಮುಂಬಯಿಯ ಗವರ್ನರ್‌ ಸರ್‌ ರೋಜನ್‌ ಲುಮ್ಲಯವರು 1942ರಲ್ಲಿ ಬ್ರಿಟಿಷ್‌ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.

ಲುಮ್ಲಯವರು ಭಾರತದ ಆಗಿನ ವೈಸ್‌ರಾಯ್‌ ಅವರಿಗೆ ಬರೆದ ಪತ್ರದಲ್ಲಿ ಈ ವಿಷಯ ತಿಳಿಸಿದ್ದರೆಂದು ಇಲ್ಲಿ ಬಹಿರಂಗವಾದ ಅಪ್ರಕಟಿತ ಅಧಿಕೃತ ದಾಖಲೆಗಳಿಂದ ತಿಳಿದುಬಂದಿದೆ.

ADVERTISEMENT

ಕಾಂಗ್ರೆಸ್‌ ಆಧುನೀಕರಣ ಪಕ್ಷಕ್ಕೆ ಪ್ರಧಾನಿ ಕರೆ

ನವದೆಹಲಿ, ಮೇ 6– ಕಾಂಗ್ರೆಸ್‌ ಪಕ್ಷವು ಪ್ರತಿಗಾಮಿಶಕ್ತಿ ಮತ್ತು ಊಳಿಗಮಾನ್ಯ ತತ್ವಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕಾದರೆ ಮತ್ತು ತನ್ನ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಂತಾಗಲು ಪಕ್ಷಕ್ಕೆ ಆಧುನಿಕ ದೃಷ್ಟಿಕೋನ ನೀಡುವುದು ಅತ್ಯಗತ್ಯ ಎಂದು ಪ್ರಧಾನಿ ಇಂದಿರಾ ಗಾಂಧಿ ಇಂದು ಕರೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.