ADVERTISEMENT

50 ವರ್ಷಗಳ ಹಿಂದೆ: ಬುಧವಾರ 04-08-1971

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2021, 17:14 IST
Last Updated 3 ಆಗಸ್ಟ್ 2021, 17:14 IST
   

ವ್ಯಾಪಕ ಅಧಿಕಾರದ ದುರುಪಯೋಗ ಇಲ್ಲ: ಲೋಕಸಭೆಗೆ ಭರವಸೆ

ನವದೆಹಲಿ, ಆ. 3– ಮೂಲಭೂತ ಹಕ್ಕುಗಳೂ ಸೇರಿ ಸಂವಿಧಾನದ ಯಾವುದೇ ಭಾಗವನ್ನಾದರೂ ತಿದ್ದುಪಡಿ ಮಾಡಲು ಸಂಸತ್ತಿಗೆ ಹಕ್ಕು ದೊರಕಿಸಿಕೊಡುವ ಸಂವಿಧಾನ (24ನೇ ತಿದ್ದುಪಡಿ) ಮಸೂದೆಯು ಇಂದು ಲೋಕಸಭೆಯಲ್ಲಿ ಅತ್ಯಧಿಕ ಪ್ರಮಾಣದ ಬೆಂಬಲ ಪಡೆಯಿತು.

ಈ ಮಸೂದೆಯ ಪ್ರಕಾರ ನೀಡಲಾಗುವ ವ್ಯಾಪಕ ಅಧಿಕಾರಗಳನ್ನು ಸರ್ಕಾರ ಎಂದಿಗೂ ದುರುಪಯೋಗ ಪಡಿಸಿಕೊಳ್ಳುವುದಿಲ್ಲ ಎಂದು ಕಾನೂನು ಸಚಿವ ಶ್ರೀ ಎಚ್.ಆರ್. ಗೋಖಲೆ ಅವರು ಸ್ಪಷ್ಟವಾದ ಆಶ್ವಾಸನೆ ಇತ್ತರು.

ADVERTISEMENT

ಪ್ರತಿಗಾಮಿಗಳು ಪ್ರಗತಿಗೆ ಉಂಟು ಮಾಡಿದ ‘ಅಡಚಣೆ’ಗಳನ್ನು ನಿರ್ಮೂಲ ಮಾಡಲು ಈ ಮಸೂದೆಯಿಂದ ಸಾಧ್ಯವಿದೆ ಎಂದು ಅದನ್ನು ಮಂಡಿಸಿದ ಸಚಿವ ಗೋಖಲೆ ಅವರು ಮತ್ತು ಅಧಿಕಾರಾರೂಢ ಪಕ್ಷದ ಉತ್ಸಾಹೀ ಸದಸ್ಯರು, ವಿರೋಧ
ಪಕ್ಷಗಳಲ್ಲಿನ ವಾಮವಾದಿಗಳ ವಕ್ತಾರರು ಹಾಗೂ ಖಾತೆರಹಿತ ಸಚಿವ ಶ್ರೀ ಸಿದ್ಧಾರ್ಥ ಶಂಕರ್ ರಾಯ್ ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.