ನವದೆಹಲಿ, ಏ. 10– ಸೋಮವಾರದಿಂದ ಉಪವಾಸ ನಡೆಸುತ್ತಿರುವ ಮೊರಾರ್ಜಿ ದೇಸಾಯಿ ಅವರ ಮೈ ತೂಕ ಇಂದು ಮಧ್ಯಾಹ್ನದ ಹೊತ್ತಿಗೆ ಒಟ್ಟು 4 ಕಿಲೊ ಗ್ರಾಂ (ಎಂಟೂ ಮುಕ್ಕಾಲು ಪೌಂಡ್‌ಗೂ ಸ್ವಲ್ಪ ಹೆಚ್ಚು) ಇಳಿಯಿತೆಂದು ವೈದ್ಯರು ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಅವರು ಒಂದು ಕಿಲೊ ಗ್ರಾಂನಷ್ಟು (ಸುಮಾರು ಎರಡು ಪೌಂಡ್ ಮೂರು ಔನ್ಸ್) ಇಳಿದುಹೋದರು.
ಮೊರಾರ್ಜಿಯವರು ಇಂದು ಸ್ವಲ್ಪ ಬಳಲಿದಂತೆ ಕಂಡರು. ಆದರೂ ಅವರು ಹಸನ್ಮುಖರಾಗಿದ್ದರು.
ಮೇ ಅಂತ್ಯದೊಳಗಾಗಿ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಸುವಂತೆ ಹಾಗೂ ತುರ್ತು ಪರಿಸ್ಥಿತಿ ರದ್ದುಗೊಳಿಸುವಂತೆ ಒತ್ತಾಯಿಸಿ ಮೊರಾರ್ಜಿ ಅವರು ಈ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಪರಿಹಾರ ಸಾಧ್ಯ: ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ‘ಹಟ ಹಿಡಿಯದಿರುವಂತೆ’ ವಿರೋಧಿ ನಾಯಕರು ಅವರ ಮನಸ್ಸನ್ನು ಒಲಿಸಿಕೊಳ್ಳುವುದಾದರೆ ಮೊರಾರ್ಜಿ ಅವರ ನಿರಶನ ಸತ್ಯಾಗ್ರಹ ನಿಲ್ಲಿಸುವ ಮಾರ್ಗ ಹುಡುಕಲು ಸಾಧ್ಯವೆನ್ನುವ ಸೂಚನೆಯನ್ನು ಕೇಂದ್ರ ಗೃಹಮಂತ್ರಿ ಬ್ರಹ್ಮಾನಂದ ರೆಡ್ಡಿ ಅವರು ಇಂದು ಲೋಕಸಭೆಯಲ್ಲಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.