ನವದೆಹಲಿ, ಏ. 11– ಉಪವಾಸ ಸತ್ಯಾಗ್ರಹದ ಐದನೆಯ ದಿನವಾದ ಇಂದು ಸಂಸ್ಥಾ ಕಾಂಗ್ರೆಸ್ ನಾಯಕ ಮೊರಾರ್ಜಿ ದೇಸಾಯಿ ಅವರ ಮೂತ್ರಜನಕಾಂಗದ ಕಾರ್ಯನಿರ್ವಹಣೆ ದುರ್ಬಲಗೊಂಡಿದೆ ಎಂದು ಅವರನ್ನು ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ.
ಮೊರಾರ್ಜಿ ದೇಸಾಯಿ ಅವರು ತುಂಬಾ ಸುಸ್ತಾಗಿದ್ದು, ನಿಶ್ಶಕ್ತರಾಗುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.
ಮೂತ್ರಜನಕಾಂಗವು ದುರ್ಬಲಗೊಳ್ಳುತ್ತಿರುವ ಸೂಚನೆಗಳು ಕಂಡುಬಂದಿವೆ ಎಂದು ಮೊರಾರ್ಜಿ ಅವರನ್ನು ಪರೀಕ್ಷಿಸಿದ ಡಾ. ಪಿ.ಸಿ.ಧಾಂಡ ಅವರು ತಿಳಿಸಿದ್ದಾರೆ.
ಮೊರಾರ್ಜಿ ಅವರು ದಿನಕ್ಕೆ ಎರಡು ಪೌಂಡಿನಷ್ಟು ತೂಕ ಕಳೆದುಕೊಳ್ಳುತ್ತಿದ್ದಾರೆ. ಲೋಕಸಭೆಯು ಮೊರಾರ್ಜಿ ದೇಸಾಯಿ ಅವರ ಉಪವಾಸ ಸತ್ಯಾಗ್ರಹದ ಬಗ್ಗೆ ನಿಗದಿತ ದಿನದಂದು ಚರ್ಚಿಸಲು ನಿರ್ಧರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.