ADVERTISEMENT

50 ವರ್ಷಗಳ ಹಿಂದೆ | ದುರ್ಬಲ ವರ್ಗಕ್ಕೆ ಉದ್ಯೋಗ ಮನೆಗೆಲಸಕ್ಕೆ ವೇತನ ಶಾಸನ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 23:30 IST
Last Updated 1 ಜೂನ್ 2025, 23:30 IST
   

ಬೆಂಗಳೂರು, ಜೂನ್‌ 1 – ದುಡಿಯುವ ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಶಾಸನ ರೀತ್ಯ ಕಡ್ಡಾಯವಾಗಿ ಜಾರಿಗೆ ತರಬೇಕು ಎಂದು ಇಂದು ಮುಕ್ತಾಯಗೊಂಡ ಕರ್ನಾಟಕ ದುಡಿಯುವ ಮಹಿಳೆಯರ ಸಮ್ಮೇಳನ ಒತ್ತಾಯ ಮಾಡಿದೆ. 

ಕರ್ನಾಟಕ ರಾಜ್ಯ ಮಹಿಳಾ ಸಂಘ ಏರ್ಪಡಿಸಿದ ಸಮ್ಮೇಳನದಲ್ಲಿ ಹೊರತಂದ ಪ್ರಣಾಳಿಕೆಯಲ್ಲಿ ದುರ್ಬಲ ವರ್ಗದ ಮಹಿಳೆಯರಿಗೆ ಉದ್ಯೋಗಾವಕಾಶ, ರಾಷ್ಟ್ರೀಯ ಅಗತ್ಯ ಆಧಾರಿತ ಕನಿಷ್ಠ
ವೇತನ, ಉದ್ಯೋಗ ನೀಡಿಕೆಯಲ್ಲಿ ಮಹಿಳೆಯರಿಗೆ ಆಗುತ್ತಿರುವ ಶೋಷಣೆ ತಪ್ಪಿಸುವುದು, ಪ್ರತಿ ನಗರ, ಊರು ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ವಸತಿ ಗೃಹಗಳ ಸ್ಥಾಪನೆ, ಹೆರಿಗೆ ಸೌಲಭ್ಯ ಕಾಯಿದೆಯ ತಿದ್ದುಪಡಿ ಮತ್ತು ಮನೆಗೆಲಸದ ಮಹಿಳೆಯರಿಗೆ ಕಾನೂನು ಮತ್ತು ಸಾಮಾಜಿಕ ರಕ್ಷಣೆ ಇತ್ಯಾದಿ ಬೇಡಿಕೆಗಳನ್ನು ಮುಂದಿಡಲಾಗಿದೆ. ಪ್ರಣಾಳಿಕೆಯನ್ನು ಡಾ. ಅನುಪಮಾ ನಿರಂಜನ ಅವರು ಓದಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT