ಬೆಂಗಳೂರು, ಜೂನ್ 3– ಭೂ ಒಡೆಯರು ಆಗಲಿರುವ ಹರಿಜನ, ಗಿರಿಜನರಿಗೆ ಭೂಮಿ ಯೊಂದು ಫಲಪ್ರದವಾದ ಆಧಾರವಾಗುವಂತೆ ಮಾಡಲು ಕರ್ನಾಟಕ ಸರ್ಕಾರ ಸೂಚನೆಯೊಂದನ್ನು ಕೇಂದ್ರದ ಮುಂದಿಟ್ಟಿದೆ.
ಕಂದಾಯ ಮಂತ್ರಿ ಎನ್. ಹುಚ್ಚಮಾಸ್ತಿ ಗೌಡ ಅವರು ಮುಂದಿಟ್ಟಿರುವ ಬೇಡಿಕೆಗೆ ಕೇಂದ್ರದ ಒಪ್ಪಿಗೆ ದೊರೆಯುವ ಸಂಭವವಿದ್ದು, ಒಪ್ಪಿಗೆ ದೊರೆತಾಗ ಹರಿಜನ, ಗಿರಿಜನರು ಭೂಮಿಯ ಜೊತೆಗೆ ಅದನ್ನು ನಿರ್ವಹಿಸಲು ಅಗತ್ಯವಾದ ಸಾಧನಗಳನ್ನೂ ಪಡೆಯಲಿದ್ದಾರೆ.
ಭೂ ಸುಧಾರಣೆ ಶಾಸನದಂತೆ ಭೂಮಿ ನೀಡಿಕೆಯು ಭೂಹೀನರ ಬಹಳ ಕಾಲದ ಒಂದು ನಿರೀಕ್ಷೆಯನ್ನು ಈಡೇರಿಸುತ್ತದೆ. ಒಡೆತನದ ಆಸೆಯನ್ನು ಪೂರೈಸುತ್ತದೆ. ಭಾವನಾತ್ಮಕವಾಗಿ ಇದು ಒಂದು ದೊಡ್ಡ ಸಾಧನೆಯಾದರೂ ಆರ್ಥಿಕವಾಗಿ ಸಹಾಯವಾಗಬೇಕಾದರೆ ಕೇವಲ ಭೂಮಿಯಷ್ಟೇ ಸಾಲದೆಂಬುದು ಹುಚ್ಚಮಾಸ್ತಿ ಗೌಡರ ಮತ.
ನಾರಾಯಣನ್ ಸ್ವದೇಶಕ್ಕೆ
ನವದೆಹಲಿ, ಜೂನ್ 3 (ಪಿಟಿಐ)– ಭಾರತದ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರು ತಮ್ಮ ಒಂದು ವಾರದ ಚೀನಾ ಪ್ರವಾಸದ ಬಳಿಕ ಇಂದು ಸ್ವದೇಶಕ್ಕೆ ಹಿಂದಿರುಗಿದರು.
ನಾರಾಯಣನ್ ಮತ್ತು ಅವರ ಪತ್ನಿ ಉಷಾ ಅವರನ್ನು ಇಂದಿರಾ ಗಾಂಧಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉಪ ರಾಷ್ಟ್ರಪತಿ ಕೃಷ್ಣಕಾಂತ್, ಕೇಂದ್ರ ಸಚಿವರಾದ ಎಲ್.ಕೆ. ಅಡ್ವಾಣಿ, ಜಗ್‌ಮೋಹನ್ ಮತ್ತು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.