ಫೋರ್ಟ್‌ಸೈಯದ್, ಜೂನ್ 5– ಈಜಿಪ್ಟ್ ಅಧ್ಯಕ್ಷ ಅನ್ವರ್ ಸಾದತ್ ಅವರು ಇಂದು ಅರಬ್– ಇಸ್ರೇಲ್ ಸಮರದ ಎಂಟನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸೂಯೆಜ್ ಕಾಲುವೆಯನ್ನು ಔಪಚಾರಿಕವಾಗಿ ಮತ್ತೆ ತೆರೆದರು.
1967ರಲ್ಲಿ ಸಮರ ಆರಂಭ ಕಾಲದಲ್ಲಿ ಮುಚ್ಚಿದ ಈ ಜಲ ಮಾರ್ಗವು ‘ಶಾಂತಿಯ ಉಪನದಿ ಮತ್ತು ಜನತೆಯ ನಡುವೆ ಸಹಕಾರ ಮತ್ತು ಅಭಿವೃದ್ಧಿಯ ಕಾಲುವೆಯಾಗಿದೆ’ ಎಂದು ಸಾದತ್ ಅವರು ತಿಳಿಸಿದರು.
ಕಳ್ಳಬಟ್ಟಿ ಕುಡಿದು ಸತ್ತವರ ಸಂಖ್ಯೆ 25
ಮದರಾಸ್, ಜೂನ್ 5– ಇಲ್ಲಿ ‘ಮಾರಕ ಪಾನೀಯ’ ವಾರ್ನಿಷ್ ಕುಡಿದು ಸತ್ತವರ ಸಂಖ್ಯೆ ಇಂದು 25ಕ್ಕೆ ಏರಿತು.
ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ ಇಂದು ಇನ್ನೂ 6 ಮಂದಿ ಸತ್ತರು. ವಿಷ ಮಿಶ್ರಿತ ವಾರ್ನಿಷ್ ಕುಡಿದ 50 ಮಂದಿಯನ್ನು ಮಂಗಳವಾರ ಆಸ್ಪತ್ರೆಗೆ ಸೇರಿಸಲಾಗಿತ್ತು.
‘ಆರ್.ಎಸ್. ಮಿಲ್ಲಿ’ ಎಂಬ ಹೆಸರಿನ ಕಳ್ಳಬಟ್ಟಿ ಮದ್ಯವನ್ನು ಆಂಧ್ರಪ್ರದೇಶದಿಂದ ಕಳ್ಳತನದಲ್ಲಿ ತರಲಾಗಿತ್ತು. ವಿಷಮಿಶ್ರಿತ ಪಾನೀಯ ಕುಡಿದ ಇನ್ನೂ 19 ಮಂದಿಯನ್ನು ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.