ನವದೆಹಲಿ, ಜೂನ್ 6– ಹಲವಾರು ವರ್ಷಗಳ ಹಿಂದೆ ಅಮೆರಿಕದ ವಾಯುದಳದ ವೈಮಾನಿಕನೊಬ್ಬ ಅತಿ ಎತ್ತರದಲ್ಲಿ ಶಬ್ದವೇಗದಲ್ಲಿ ವಿಮಾನ ಹಾರಿಸಿಕೊಂಡು ಹೋಗುತ್ತಿದ್ದ. ಇದ್ದಕ್ಕಿದ್ದಂತೆಯೇ ವಿಮಾನ ಉರುಳಿಕೊಂಡು ಬಂದು ನೆಲಕ್ಕಪ್ಪಳಿಸಿತು. ವಿಮಾನ ನುಚ್ಚುನೂರಾಯಿತು. ವೈಮಾನಿಕ ಸಾವಿಗೀಡಾದ. ವಿಮಾನದ ಉಪಕರಣಗಳು ಸರಿಯಾಗಿದ್ದವು. ವೈಮಾನಿಕ ಅನುಭವಿ. ವಿಮಾನ ಹತ್ತುವುದಕ್ಕೆ ಮುನ್ನ ಅವನಲ್ಲಿ ಲೋಪ ದೋಷಗಳೇನೂ ಕಂಡುಬಂದಿರಲಿಲ್ಲ... ಅಪಘಾತಕ್ಕೆ ಕಾರಣ ಯಾರಿಗೂ ಹೊಳೆಯಲಿಲ್ಲ...
ವಿಮಾನ ಅಪಘಾತಕ್ಕೆ ಕಾರಣ ವೈಮಾನಿಕ ವೈದ್ಯರಿಂದ ದೊರಕಿತು. ಅವನ ದೇಹದ ಪರೀಕ್ಷೆ ನಡೆಸಿ ಅವನ ಕರುಳಿನ ಅಧ್ಯಯನ ನಡೆಸಿ ಅವನು ‘ಪರ್ಟಿಗೋ’ ರೋಗಕ್ಕೆ ಬಲಿಯಾದ ಎಂದರು.
‘ಪರ್ಟಿಗೋ’ ಎಂದರೆ ಅತಿ ಎತ್ತರದಲ್ಲಿ ಉಂಟಾಗುವ ಮಾನಸಿಕ ದುರ್ಬಲತೆ. ಎತ್ತರದ ಹೆದರಿಕೆ ಇರುವವರಿಗೆ ಈ ರೋಗ ಬಡಿಯುತ್ತದೆ. ಈ ವೈಮಾನಿಕನಿಗೆ ಒಮ್ಮೆಲೆ ತಾನು ಭೂಮಿಯಿಂದ ಅತಿ ಎತ್ತರದಲ್ಲಿ ಏಕಾಂಗಿಯಾಗಿ ಇದ್ದೇನೆ ಎಂಬ ಅರಿವು ಉಂಟಾಯಿತು. ತಲೆ ಸುತ್ತಲು ಪ್ರಾರಂಭವಾಯಿತು. ಹೊಟ್ಟೆ ತೊಳಸಿಬಂದು ಹತೋಟಿ ತಪ್ಪಿತು. ವಿಮಾನ ನಡೆಸಲು ಸಾಧ್ಯವಾಗಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.