ADVERTISEMENT

50 ವರ್ಷಗಳ ಹಿಂದೆ: ಬುಧವಾರ 10–03–1971

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 19:31 IST
Last Updated 9 ಮಾರ್ಚ್ 2021, 19:31 IST
   

ಮತ ಎಣಿಕೆಯ ಎಲ್ಲ ಘಟ್ಟದಲ್ಲೂ ಮತದಾನದ ರಹಸ್ಯ ರಕ್ಷಣೆ
ಬೆಂಗಳೂರು, ಮಾರ್ಚ್ 9–
ಮತಗಳ ಎಣಿಕೆಯ ನೂತನ ವಿಧಾನದಲ್ಲಿ ಮತದಾನದ ರಹಸ್ಯ ಎಲ್ಲ ಘಟ್ಟಗಳಲ್ಲೂ ರಕ್ಷಿಸಲ್ಪಟ್ಟಿದೆ. ಲೋಕಸಭೆಯ ಮಧ್ಯಂತರ ಚುನಾವಣೆಯಿಂದ ಜಾರಿಗೆ ಬಂದಿರುವ ಈ ಪದ್ಧತಿಯಂತೆ ಮೊದಲು ಒಂದು ಮತಗಟ್ಟೆಯ ಪೆಟ್ಟಿಗೆ ಅಥವಾ ಪೆಟ್ಟಿಗೆ ಗಳನ್ನು ತೆಗೆದುಕೊಂಡು, ಅವುಗಳ ಮೇಲಿನ ಸೀಲುಗಳು ಭದ್ರವಾಗಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅಭ್ಯರ್ಥಿಗೆ, ಅವರ ಪ್ರತಿನಿಧಿಗಳಿಗೆ ತೋರಿಸಲಾಗುವುದು.

ರಾಷ್ಟ್ರದಾದ್ಯಂತ ಜನಗಣತಿ ಇಂದು ಆರಂಭ
ನವದೆಹಲಿ, ಮಾರ್ಚ್ 9–
ಹತ್ತು ಲಕ್ಷಕ್ಕೂ ಹೆಚ್ಚು ಜನ ಲೆಕ್ಕಿಗರು ದೇಶದ ಸುಮಾರು 56 ಕೋಟಿ ಜನತೆಯ ವಿವರ
ಜನಗಣತಿಯನ್ನು ಬುಧವಾರ ಆರಂಭಿಸುವರು.

ವಿಶ್ವ ಜನಸಂಖ್ಯೆಯ ಆರರಲ್ಲೊಂದು ಪಾಲಿನಷ್ಟಾಗುವ ಭಾರತೀಯ ಜನತೆಯ ಜನಗಣತಿಯನ್ನು, ಪ್ರತೀ ಮನೆಗೂ ಹೋಗಿ ಸಂಗ್ರಹಿಸುವ ಭಾರೀ ಕಾರ್ಯಕ್ರಮ 31ರಂದು ಕೊನೆಗೊಳ್ಳುವುದು. ಜನಸಂಖ್ಯೆಯ ವಿವರದ ಜತೆಗೆ ಜನತೆಯ ಸಾಮಾಜಿಕ, ಆರ್ಥಿಕ ವಿವರಗಳನ್ನು ಪಟ್ಟಿ ಮಾಡಲಾಗುವುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.