
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಪ್ರಸಕ್ತ ವರ್ಷ 30 ಲಕ್ಷ ಟನ್ ವಿದೇಶಿ ಆಹಾರ ಆಮದಾಗಬಹುದು
ನವದೆಹಲಿ, ನ. 18– ಭಾರತ ಸುಮಾರು 30 ಲಕ್ಷ ಟನ್ ಆಹಾರ ಧಾನ್ಯಗಳನ್ನು ಈ ವರ್ಷ ಆಮದು ಮಾಡಿಕೊಳ್ಳಬಹುದು ಎಂಬುದಾಗಿ ಆಹಾರ ಸಚಿವ ಕೆ.ಎಂ. ಮುನ್ಷಿಯವರು, ಇಂದು
ಪಾರ್ಲಿಮೆಂಟಿನಲ್ಲಿ ಪ್ರಕಟಿಸಿದರು.
ಇಂದಿನಂತಹ ಸ್ಥಿತಿ ಇರುವವರೆಗೂ ತನ್ನ ಹಣಕಾಸಿನ ಸ್ಥಿತಿ ಅವಕಾಶ ನೀಡುವಷ್ಟು ವಿದೇಶಿ ಧಾನ್ಯವನ್ನು ಆಮದು ಮಾಡಿಕೊಳ್ಳಲು ಭಾರತ ಸರ್ಕಾರ ಹಿಂದೆಮುಂದೆ ನೋಡದೆಂದರು.
ನರಿ–ತೋಳಗಳ ಹಾವಳಿ: ಉತ್ತರ ಪ್ರದೇಶದಲ್ಲಿ ನರಿ ಮತ್ತು ತೋಳಗಳು ಹಾವಳಿ ಮಾಡುತ್ತಿರುವ ವಿಷಯ ಕುರಿತು ಪ್ರಶ್ನೋತ್ತರಗಳು ನಡೆದಾಗ ಪಾರ್ಲಿಮೆಂಟಿನಲ್ಲಿ ನಗೆಯ
ಕೋಲಾಹಲವೆದ್ದಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.