
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಜ. 30– ಲೈಸನ್ಸ್ ಪಡೆಯದಿರುವ ಲಾಟರಿಗಳು ಹಾಗೂ ಬಹುಮಾನವುಳ್ಳ ಸ್ಪರ್ಧೆಗಳನ್ನು ಕ್ರಮಬಾಹಿರವೆಂದು ಸಾರುವ ಹಾಗೂ ಅವುಗಳ ಮೇಲೆ ತೆರಿಗೆ ವಿಧಿಸಲು ಸರ್ಕಾರಕ್ಕೆ ಅವಕಾಶ ಕೊಡಲು ಲಾಟರಿಗಳು ಮತ್ತು ಬಹುಮಾನವುಳ್ಳ ಸ್ಪರ್ಧೆಗಳ ಹತೋಟಿ ಹಾಗೂ ತೆರಿಗೆಯ ಮಸೂದೆಯನ್ನು ಇಂದು ನಡೆದ ಶಾಸನಸಭೆ ಸೆಲೆಕ್ಟ್ ಸಮಿತಿ ವರದಿಯೊಡನೆ ಅಂಗೀಕರಿಸಿತು. ವಿ. ವೆಂಕಟಪ್ಪನವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಅನೇಕ ಮೋಸದ ಲಾಟರಿಗಳು ಮತ್ತು ನಡೆಸುವವರ ಲಾಭಕ್ಕಾಗಿಯೇ ಇರುವ ಲಾಟರಿಗಳು ಮತ್ತು ಬಹುಮಾನವುಳ್ಳ ಸ್ಪರ್ಧೆಗಳಲ್ಲಿ ಗೆಲ್ಲಬಹುದೆಂಬ ಆಸೆಯಿಂದ ದುಡ್ಡು ಹಾಕಿ ಬಡಜನರು ಕಳೆದುಕೊಳ್ಳುತ್ತಿರುವುದನ್ನು ನಿಲ್ಲಿಸುವ ಉದ್ದೇಶದಿಂದ ಸರ್ಕಾರ ಈ ಮಸೂದೆ ತಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.