‘ಸಂಜೀವಿನಿ’ (?) ನುಂಗಿದರೂ ರೋಗ ಬಿಡಲಿಲ್ಲ
ಕಟಕ್, ಡಿ. 17– ‘ಸರ್ವರೋಗ ನಿವಾರಣೆ’ ಮದ್ದಿಗಾಗಿ ಜನ ಬರುವುದನ್ನು ತಡೆಯಬೇಕೆಂಬುದಾಗಿ ಈ ದಿನ ಒರಿಸ್ಸಾದ ಸಾರ್ವಜನಿಕ ಸಂಪರ್ಕ ಶಾಖಾ ಸಚಿವ ಪ್ರವಟಕ ಮೋಹನ ಪ್ರಧಾನ್‌ರವರು ನೆರೆ ಪ್ರಾಂತ್ಯಗಳ ಸಾರ್ವಜನಿಕರಿಗೂ ಪತ್ರಿಕೆಗಳಿಗೂ ವಿನಂತಿ ಮಾಡಿಕೊಂಡರು.
ಕುರುಬ ಹುಡುಗನ ವೈದ್ಯ ಪ್ರತೀತಿಗೆ ಮರುಳಾಗಿ ರಿಂಕಲ್ಟೆಗೆ ಬಂದ ಯಾತ್ರಿಕರು ಹಾಗೂ ರೋಗಿಗಳಲ್ಲಿ ಅನೇಕರು ಕಾಲರಾದಿಂದ ಮೃತರಾದರೆಂದೂ ತಿಳಿಸಿದರು. ಔಷಧಿ ನುಂಗಿದ ಕೆಲವರನ್ನು ರೋಗ ನುಂಗಿತೆಂದರು.
ಕಮ್ಯುನಿಸ್ಟರೆಂದು ಸ್ತ್ರೀ, ಪುರುಷ, ಮಕ್ಕಳಿಗೆ ಗುಂಡೇಟು
ಸಿಯೋಲ್, ಡಿ. 17– ದಕ್ಷಿಣ ಕೊರಿಯದ ಮಹಿಳೆಯೊಬ್ಬಳನ್ನು ಕಳೆದ ಶುಕ್ರವಾರ ಬಲಪಕ್ಷದ ಕೊರಿಯಾ ಯುವಜನ ರಕ್ಷಣಾ ಸಂಘದವರು ಕೊಲೆ ಮಾಡಲೆತ್ನಿಸುತ್ತಿದ್ದಾಗ, ಅಮೆರಿಕದ ಕಾಲಾಳು ದಳದ ಪಹರೆಯವರು ಮಧ್ಯ ಹೋಗಿ ತಪ್ಪಿಸಿದರು. ಆದರೆ, ಇವರು ಬರುವ ಹೊತ್ತಿಗೆ 26 ಮಂದಿ ಇತರರನ್ನು ವಧೆ ಮಾಡಲಾಗಿತ್ತು.
ವಧೆಗಾಗಿ ನಿಲ್ಲಿಸಲಾಗಿದ್ದ ಸ್ತ್ರೀಯರಲ್ಲಿ ಬದುಕಿಕೊಂಡವಳು ಈಕೆಯೊಬ್ಬಳೆ. ತನ್ನ 9 ವರ್ಷದ ಮಗನನ್ನೂ, ಮತ್ತೊಬ್ಬಾಕೆಯ 13 ವರ್ಷದ ಕುಮಾರಿಯನ್ನೂ ಗುಂಡಿನಿಂದ ಹೊಡೆದು ಕೊಲೆ ಮಾಡಿದ ದೃಶ್ಯವನ್ನು ಈಕೆ ಕಣ್ಣಾರೆ ಕಂಡಳು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.