
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಫೆ. 8– ಜನವರಿ 29ನೆಯ ತಾರೀಖು ಸಂಜೆ ಮೈಸೂರು ಶ್ರೇಷ್ಠ ನ್ಯಾಯಾಧೀಶ ಪಿ. ಮೇದಪ್ಪ
ಅವರ ಮನೆಯವರೆಲ್ಲರೂ ಹೊರಗೆ ಹೋಗಿದ್ದಾಗ ಶ್ರೇಷ್ಠ ನ್ಯಾಯಾಧೀಶರ ಮನೆಯ ಸೇವಕರನ್ನು ಒಳಹಾಕಿಕೊಂಡು, ಅವರ ನೆರವಿನಿಂದ ಮೇದಪ್ಪನವರಿಗೆ ವಿಷಪ್ರಾಶನ ಮಾಡಿರುವ ಹೇಡಿತನದ ಪ್ರಯತ್ನವೊಂದು ನಡೆಯಿತೆಂದು ನಂಬಿಕೆಗೆ ಅರ್ಹವಾದ ಕಡೆಗಳಿಂದ ನಿರ್ದಿಷ್ಟವಾಗಿ ತಿಳಿದುಬಂದಿದೆ.
ಈ ವಿಷಪ್ರಾಶನ ಪ್ರಯತ್ನದಲ್ಲಿ ಉಪಯೋಗಿಸಲಾದ ಕರಾಳ ವಿಷವು ‘ಮರ್ಕ್ಯೂರಿಕ್ ಕ್ಲೋರೈಡ್’ ಎಂದೂ, ಈ ವಿಷವು ಸಾಮಾನ್ಯವಾಗಿ ದೊರೆಯುವಂತಹದ್ದಲ್ಲವೆಂದೂ ಗೊತ್ತಾಗಿದೆ. ಮೇದಪ್ಪನವರು ಕುಡಿಯಲಿದ್ದ ‘ಟೀ’ಯಲ್ಲಿ ವಿಷವನ್ನು ಹಾಕಲಾಗಿತ್ತು ಎಂದೂ, ಈ ವಿಪತ್ತಿನಿಂದ ಅವರು ಪಾರಾದುದು ದೈವವಶವೆಂದೂ ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.