
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಫೆ. 11– ಕಳೆದ 10 ದಿನಗಳಲ್ಲಿ ಬೆಂಗಳೂರು, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ 700 ಮಂದಿಗೆ ಕಾಲರಾ ರೋಗ ತಗಲಿ, 400 ಮಂದಿ ಮೃತಪಟ್ಟಿದ್ದಾರೆ.
ಇಲ್ಲಿಯವರೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಇನಾಕ್ಯುಲೇಷನ್ ಹಾಕಲಾಗಿದೆ.
ಮೈಸೂರು ನಗರದಲ್ಲಿ ಸ್ವಲ್ಪ ರೋಗದ ಸೋಂಕು ಇದೆ. ಕಾಲರಾ ರೋಗ ಹರಡಿರುವ 120 ಹಳ್ಳಿಗಳ ಪ್ರದೇಶದಲ್ಲಿ ಮನೆಗಳಿಗೂ, ಬಾವಿಗಳಿಗೂ ಕ್ರಿಮಿನಾಶಕ ಔಷಧಿಗಳನ್ನು ಹಾಕಿರುವುದೇ ಅಲ್ಲದೇ ತುಂಬಾ ಸೋಂಕಿರುವ ಹಳ್ಳಿಗಳನ್ನು ಪ್ರತ್ಯೇಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.