
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಕಮ್ಯುನಿಸ್ಟ್ ಪಕ್ಷದ ನಿಷೇಧ ಅಕ್ರಮ: ಪಶ್ಚಿಮ ಬಂಗಾಳ ಹೈಕೋರ್ಟ್ ತೀರ್ಪು
ಕಲಕತ್ತೆ, ಜ. 5– ಪಶ್ಚಿಮ ಬಂಗಾಳದಲ್ಲಿ ಕಮ್ಯುನಿಸ್ಟ್ ಪಕ್ಷದ ಮೇಲೆ 1948ನೇ ಮಾರ್ಚಿ ತಿಂಗಳಿನಲ್ಲಿ ಹಾಕಿದ್ದ ಪ್ರತಿಬಂಧಕಾಜ್ಞೆಯು ಇಂದು ಕಲ್ಕತ್ತಾ ಶ್ರೇಷ್ಠ ನ್ಯಾಯಾಸ್ಥಾನದ ತೀರ್ಪಿನ ರೀತ್ಯಾ ಅಕ್ರಮವೆಂದು ತೀರ್ಮಾನವಾಯಿತು.
ಜಸ್ಟೀಸ್ ಸೆನ್ ಮತ್ತು ಜಸ್ಟೀಸ್ ಚಂದರ್‌ರವರು ಕಮ್ಯುನಿಸ್ಟ್ ಸ್ಥಾನಬದ್ಧರ ಅರ್ಜಿಗೆ ತೀರ್ಪನ್ನು ಕೊಟ್ಟು, ಪಕ್ಷವನ್ನು ಅಕ್ರಮವೆಂದು ಸಾರಿದ ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಶಾಸನ ಭಾರತ ರಾಜ್ಯಾಂಗದ ರೀತ್ಯಾ ನ್ಯಾಯಬಾಹಿರವೆಂದು ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.