
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ಗಲೀಜು ಪ್ರದೇಶಗಳನ್ನು ಉತ್ತಮಗೊಳಿಸುವುದು ಅಗತ್ಯ
ಬೆಂಗಳೂರು, ನ. 28– ‘ಸುಮಾರು 1 ಲಕ್ಷ 25 ಸಾವಿರ ಜನರು ವಾಸ ಮಾಡುತ್ತಿರುವ ನಗರದ 36 ಗಲೀಜು ಪ್ರದೇಶಗಳನ್ನು ಚೊಕ್ಕಟಗೊಳಿಸಿ ಉತ್ತಮಪಡಿಸಲು ಕಡೆಯ ಪಕ್ಷ ಪ್ರತಿವರ್ಷವೂ 10 ಲಕ್ಷ ರೂ. ಖರ್ಚು ಮಾಡಬೇಕಾದುದು ಅಗತ್ಯವಾಗಿದೆ. ಕಾರ್ಪೊರೇಷನ್ ಈಗಿರುವ ಚಿಂತಾಜನಕ ಪರಿಸ್ಥಿತಿಗೆ ಗಮನ ಕೊಟ್ಟು ಈ ಕಾರ್ಯ ನಡೆಸುವುದೆಂದು ನಂಬುತ್ತೇನೆ’ ಎಂದು ಮೇಯರ್ ಎನ್. ಕೇಶವಯ್ಯಂಗಾರರು ಇಂದು ಬೆಳಿಗ್ಗೆ ಅಲಸೂರು ಕೆರೆಯ ದೀಪವೊಂದರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.
ತಾವು ಮೇಯರ್ ಆಗಿ ಬಂದಂದಿನಿಂದ ಇಲ್ಲಿಯವರೆಗಿನ ಕಾರ್ಪೊರೇಷನ್ ನಡೆಸಿರುವ ಕಾರ್ಯಗಳ ಬಗ್ಗೆ ಮೇಯರ್‌ರವರು ವಿವರವನ್ನಿತ್ತು, ಕೆಲವು ವಿಷಯಗಳ ಬಗ್ಗೆ ವೈಯಕ್ತಿಕವಾಗಿ ಸಲಹೆಗಳನ್ನೂ ಇತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.