75 ವರ್ಷಗಳ ಹಿಂದೆ ಈ ದಿನ
ಕಾಶಿ ನಗರದಲ್ಲಿ ಶ್ವಾನ ವಿವಾಹ
ಕಾಶಿ, ಆಗಸ್ಟ್ 26– ನಾಯಿಗಳ ಮದುವೆಗಾಗಿ ಇಲ್ಲಿಯ ದರ್ಜಿ ಯೊಬ್ಬನು ಕಳೆದ ಸಂಜೆ 2,000 ರೂಪಾಯಿಗಳನ್ನು ವೆಚ್ಚ ಮಾಡಿದ. ಒಂದು ವರ್ಷದ ತನ್ನ ಮುದ್ದು ನಾಯಿಯನ್ನು ಮೆರವಣಿಗೆ ಯಲ್ಲಿ ಬ್ಯಾಂಡ್ ಸಮೇತ (ಹಿಂದೆ ಮದುವೆ ಮನೆಯ ಜನರಿದ್ದರು) ಗಡಿಯಾರದವನ ಮನೆಗೆ ಕರೆದೊಯ್ದನು. ಈತನ, ಅದೇ ಜಾತಿಯ ಹೆಣ್ಣು ನಾಯಿಯೇ ವಧು.
ದರ್ಜಿಯೂ, ಗಡಿಯಾರದವನೂ ತಮ್ಮ ಮುದ್ದು ನಾಯಿಮರಿಗಳ ವಿವಾಹೋತ್ಸವದ ಸಂದರ್ಭದಲ್ಲಿ ನೆರೆದಿದ್ದ ಜನರನ್ನು ಮನರಂಜನೆ ಯಿಂದ ಆನಂದಗೊಳಿಸಿದರು.
ಉತ್ತರ ಪ್ರದೇಶದಲ್ಲಿ ಎಂಟು ನದಿಗಳಲ್ಲಿ ಹುಚ್ಚು ಪ್ರವಾಹ
ಲಕ್ನೋ, ಆಗಸ್ಟ್ 26– ಗಂಗಾ ಮತ್ತು ಸರಯೂ ನದಿಗಳನ್ನೂ ಸೇರಿಸಿಕೊಂಡು 8 ನದಿಗಳಲ್ಲಿ ಹುಚ್ಚು ಪ್ರವಾಹ ಬಂದುದರ ಪರಿಣಾಮವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.