
ಪ್ರಜಾವಾಣಿ ವಾರ್ತೆ
75 ವರ್ಷಗಳ ಹಿಂದೆ ಈ ದಿನ
ಬೆಂಗಳೂರು, ಡಿ. 19– ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಏರಿಂಡಿಯಾ ಡಕೋಟ ವಿಮಾನ ಬಿದ್ದಿದ್ದ ಸ್ಥಳಕ್ಕೆ ಸೈನಿಕ ಶೋಧನೆ ಪಡೆಯವರು ಈ ಸಂಜೆ ಹೋದಾಗ ಪುಡಿ ಪುಡಿಯಾಗಿದ್ದ ವಿಮಾನದ ಚೂರುಗಳ ರಾಶಿ, ಪ್ರಯಾಣಿಕರ ಮತ್ತು ಚಾಲಕ ಪಡೆಯವರ ಶವಸಮೂಹ ಕಣ್ಣಿಗೆ ಬಿತ್ತು. ಈ ದುರಂತದ ಪ್ರದೇಶ ಕಿಲಕೋಟಗಿರಿಗೆ 4 ಮೈಲಿ ದೂರದ ಕಾಡು.
ವಿಮಾನ ಬಿದ್ದಾಗ ಬೆಂಕಿ ಹೊತ್ತಿದಂತಿಲ್ಲ; ಒಂದು ತರಹ ಆಸ್ಫೋಟನೆಯಾಗಿರಬೇಕು. ವಿಮಾನದಲ್ಲಿದ್ದ ಅಂಚೆ ಯಥಾವತ್ತು ಹಾಗೇ ಇದೆ.
ವಿಮಾನದಲ್ಲಿದ್ದವರೆಲ್ಲ ಸತ್ತು ಹೋಗಿದ್ದಾರೆ. ಶವಗಳೆಲ್ಲ ಕೊಳೆತು ಒಂದುಗೂಡಿರುವುದರಿಂದ ಅವನ್ನು ಬೇರ್ಪಡಿಸಲು ಸಾಧ್ಯವಿಲ್ಲವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.