ADVERTISEMENT

25 ವರ್ಷಗಳ ಹಿಂದೆ: ಪ್ರಜಾವಾಣಿ ಕಡತಗಳಿಂದ

​ಪ್ರಜಾವಾಣಿ ವಾರ್ತೆ
Published 14 ಮೇ 2022, 20:54 IST
Last Updated 14 ಮೇ 2022, 20:54 IST
   

ಬೊಫೋರ್ಸ್ ಹಗರಣ: 7 ಗಣ್ಯರ ವಿರುದ್ಧ ಕ್ರಮ

ನವದೆಹಲಿ, ಮೇ 14 (ಪಿಟಿಐ)– ಬೊಫೋರ್ಸ್ ಫಿರಂಗಿ ಹಗರಣದ ಕುರಿತು ತನಿಖೆ ನಡೆಸಲು ರಚಿಸಿದ್ದ ಸಿಬಿಐನ ವಿಶೇಷ ತನಿಖಾ ತಂಡ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ಹಗರಣದ ವೇಳೆ ಸರ್ಕಾರಿ ಸೇವೆಯಲ್ಲಿದ್ದ ಏಳು ಮಂದಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರ್ಕಾರದ ಅನುಮತಿ ಕೇಳಿದೆ. ಸುಮಾರು 1,437 ಕೋಟಿ ರೂಪಾಯಿ ಮೌಲ್ಯದ ಫಿರಂಗಿ ಖರೀದಿಯಲ್ಲಿ ‘ಎಬಿ ಬೊಫೋರ್ಸ್’ ಕಂಪನಿಯಿಂದ 64 ಕೋಟಿ ರೂಪಾಯಿ ರುಷವತ್ತು ಪಡೆಯಲಾಗಿದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT