ADVERTISEMENT

25 ವರ್ಷಗಳ ಹಿಂದೆ: ದಂಡುಪಾಳ್ಯದ ಐವರು ಕುಖ್ಯಾತ ಕೊಲೆಗಡುಕರ ಬಂಧನ

2001ರ ಫೆಬ್ರುವರಿ 4, ಭಾನುವಾರ

ಪ್ರಜಾವಾಣಿ ವಿಶೇಷ
Published 3 ಫೆಬ್ರುವರಿ 2026, 19:30 IST
Last Updated 3 ಫೆಬ್ರುವರಿ 2026, 19:30 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ದಂಡುಪಾಳ್ಯದ ಐವರು ಕುಖ್ಯಾತ ಕೊಲೆಗಡುಕರ ಬಂಧನ

ಬೆಂಗಳೂರು, ಫೆ. 3– ರಾಜಧಾನಿ ಮತ್ತು ರಾಜ್ಯದ ಪ್ರಮುಖ ನಗರಗಳಲ್ಲಿ ಒಂದು ವರ್ಷದ ಅಂತರದಲ್ಲಿ ಕೊಲೆ, ದರೋಡೆ ನಡೆಸಿ ಸಾರ್ವಜನಿಕರನ್ನು ತಲ್ಲಣಗೊಳಿಸಿದ್ದ ಕುಖ್ಯಾತರನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಸಿಕ್ಕಿಬಿದ್ದವರು ಹೊಸಕೋಟೆಯ ದಂಡುಪಾಳ್ಯದವರು. ರಾಜ್ಯದ ವಿವಿಧ ಕಡೆಗಳಲ್ಲಿ ನಡೆದ 25 ಕೊಲೆ ಪ್ರಕರಣಗಳ ರಹಸ್ಯವನ್ನು ಬಯಲುಗೊಳಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ರೂಪಾಯಿ ಮೌಲ್ಯದ ಆಭರಣ ವಶಪಡಿಸಿಕೊಂಡಿದ್ದಾರೆ.

ADVERTISEMENT

ದಂಡುಪಾಳ್ಯದ ದೊಡ್ಡಹನುಮ ಉರುಫ್‌ ಹನುಮ (36), ಆತನ ಪತ್ನಿ ಲಕ್ಷ್ಮಮ್ಮ ಉರುಫ್‌ ಲಕ್ಕಿ (30), ಬೆಂಗಳೂರು ಗ್ರಾಮಾಂತರ ಜಿಲ್ಲೆ ಕಾಡುಗೋಡಿ ಸಮೀಪದ ದಿನ್ನೂರು ಕಾಲೊನಿಯ ವೆಂಕಟೇಶ ಉರುಫ್‌ ಚಂದ್ರ (33), ಮುನಿಕೃಷ್ಣ ಉರುಫ್‌ ಕೃಷ್ಣ (28) ಹಾಗೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕಿನ ನಲ್ಲತಿಮ್ಮ (28) ಬಂಧಿತರು.

***

ವಿಕೋಪ ನಿರ್ವಹಣೆಗೆ ಎರಡು ಸಮಿತಿಗಳ ರಚನೆಗೆ ನಿರ್ಧಾರ

ನವದೆಹಲಿ, ಫೆ. 3 (ಪಿಟಿಐ)– ಭೂಕಂಪಪೀಡಿತ ಗುಜರಾತ್‌ನಲ್ಲಿ ಪರಿಹಾರ ಮತ್ತು ಪುನರ್‌ನಿರ್ಮಾಣ ಕಾರ್ಯಗಳಿಗೆ ನೆರವು ನೀಡಲು ರಾಜಕೀಯ ಪಕ್ಷಗಳ ರಾಷ್ಟ್ರೀಯ ನಿರ್ವಹಣಾ ಸಮಿತಿ ಹಾಗೂ ನೈಸರ್ಗಿಕ ವಿಕೋಪಗಳನ್ನು ನಿಭಾಯಿಸಲು ಶಾಶ್ವತವಾಗಿ ತಜ್ಞರನ್ನೊಳಗೊಂಡ ರಾಷ್ಟ್ರೀಯ ದುರಂತ ನಿರ್ವಹಣಾ ಸಮಿತಿ ರಚಿಸಲು ಕೇಂದ್ರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.