ADVERTISEMENT

ಮಂಗಳವಾರ, 8–2–1994

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 19:30 IST
Last Updated 7 ಫೆಬ್ರುವರಿ 2019, 19:30 IST
   

ಚಾರ್ಲ್ಸ್ ಮೇಲೆ ಮತ್ತೆ ದಾಳಿ

ಆಕ್ಲೆಂಡ್, ಫೆ. 7 (ರಾಯಿಟರ್)– ಬ್ರಿಟನ್ ರಾಜಕುಮಾರ ಚಾರ್ಲ್ಸ್ ಮೇಲೆ ಇಂದು ಇಲ್ಲಿ ದಾಳಿ ಮಾಡಿದ ಡಬ್ಬ ಹಿಡಿದ ವ್ಯಕ್ತಿಯೊಬ್ಬ ಯಾವುದೋ ದ್ರವವನ್ನು ಎರಚಲು ಯತ್ನಿಸಿದ.

ಚಾರ್ಲ್ಸ್ ಅಪಾಯದಿಂದ ಪಾರಾಗಿದ್ದು, ದಾಳಿ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು. ದಾಳಿಯ ಕಾರಣ ತಿಳಿದು ಬಂದಿಲ್ಲ. ಚಾರ್ಲ್ಸ್ ಅವರ ಆಸ್ಟ್ರೇಲಿಯ ಹಾಗೂ ನ್ಯೂಝಿಲೆಂಡ್ ಪ್ರವಾಸದಲ್ಲಿ ಅವರ ಮೇಲೆ ನಡೆದ ಎರಡನೇ ದಾಳಿಯಾಗಿದೆ.

ADVERTISEMENT

‌ಭಯಾನಕ ಜ್ವರ ಡೆಂಗೆ

‌ಪುಣೆ, ಫೆ. 7 (ಪಿಟಿಐ)– ಭಾರತದಲ್ಲಿ ಅಧಿಕ ಮಕ್ಕಳು ಡೆಂಗೆ ಜ್ವರಕ್ಕೆ ಬಲಿಯಾಗುತ್ತಿದ್ದಾರೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವೆ ಪುಷ್ಪಾ ಹಿರೇ ತಿಳಿಸಿದ್ದಾರೆ.

ಶೇ 60ರಷ್ಟು ಜ್ವರದ ಪ್ರಕರಣಗಳು ವೈರಸ್‌ನಿಂದ ಬರುತ್ತಿವೆ ಎಂದು ಗೊತ್ತಾಗಿದ್ದು ಹೆಚ್ಚಿನವು ಡೆಂಗೆ ವೈರಸ್‌ಗಳು ಎಂದು ಅವರು ರಾಷ್ಟ್ರೀಯ ವೈರಸ್ ಸಂಸ್ಥೆ ಇಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ತಿಳಿಸಿದರು.

ಚಿಂಚಣಿ ಸ್ವಾಮಿ ಕೊಲೆ

ಬೆಳಗಾವಿ, ಫೆ. 7– ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಚಿಂಚಣಿ ಸಿದ್ಧಸಂಸ್ಥಾನ ಮಠದ ಸಿದ್ಧಪ್ರಭು ಸ್ವಾಮಿಗಳನ್ನು ಮಠದ ಹೊಲದ ಆವರಣದಲ್ಲಿ ಇಂದು ಕೊಲೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.